ಪಿಜಿ ಎಂಬ ಭಾವ-ಬೆಸುಗೆಯ ಮನೆಯೊಳಗೆ

ಕಾಲೇಜಿಗೆ ನ್ಯಾಕ್ ಬಂದ‌ ಸಂದರ್ಭ. ಕಾಲೇಜಿನಲ್ಲಿ ಕೆಲಸವನ್ನು ಮುಗಿಸಿ, ಬಸ್ ಅಲ್ಲಿ ನಮ್ಮೂರ ತಲಪೋದು ರಾತ್ರಿಯಾಗ್ತಿತ್ತು, ಅದಕ್ಕೆ ಹೊರಗಡೆ ಪಿಜಿ ಅಲ್ಲಿ ಇರುವೆ ಮನೆಲಿ ಹೇಳಿದಾಗ ಅವರು ಒಪ್ಪಿಗೆ ನೀಡಿ ಪಿಜಿಗೆ ಸೇರಿಸಿದರು.

ನಾನು ಮೊದಲ ಬಾರಿ ಈ ಥರ ಹೊರಗಡೆ ಇರ್ತಾ ಇದ್ದಿದ್ದು, ನಾನು ವಿದ್ಯಾಭ್ಯಾಸಕ್ಕೆಂದು ಸಂಬಂಧಿಕರ ಮನೆಯಲ್ಲಿ ಇದ್ದರೂ ಕೂಡ ಈ ತರ ಪಿಜಿ ಅಲ್ಲಿ ರೂಮ್ ಅಲ್ಲಿ ಇರೋದು ಹೊಸ ಅನುಭವವಾಗಿತ್ತು. ಹೇಗಿರುತ್ತದೋ ಪಿಜಿ, ಊಟ ಹೇಗೆ ಕೊಡ್ತಾರೆ, ನನ್ನ ರೂಮಮೇಟ್ ಹೇಗಿರ್ತಾರೆ ಎಂಬೆಲ್ಲ ಅಳಕು ಮನದಲ್ಲಿ ಇಟ್ಟುಕೊಂಡು ಪಿಜಿಯ ವಾಸ್ತವ್ಯಕ್ಕೆ ಬಂದೆ.

ನಾನು ಮೊದಲನೇ ಬಾರಿ ನನಗೆಂದು ಕೊಟ್ಟ ರೂಮಿಗೆ ಬಂದಾಗ, ರೂಮಲ್ಲಿ ಯಾರು ಇರಲಿಲ್ಲ, ಟೇಬಲ್ ಮೇಲೆ ವಿಜ್ಣಾನದ ಪುಸ್ತಕ, ಹಗ್ಗಕ್ಕೆ ನೇತು ಹಾಕಿದ ಬಟ್ಟೆ, ರೂಮನಲ್ಲಿಯೆ ಇದ್ದ ತೆಂಗಿನ ಮರ (ಮರ ಕಡಿಯದೆ, ಅದನ್ನು ಹಾಗೇ ಬಿಟ್ಟು ಕಟ್ಟಿಸಿದ್ದರು) ಇವೆಲ್ಲವೂ ಹೊಸದಾಗಿ ಬಂದ ನನಗೆ ಸ್ವಾಗತ ಕೋರಿದಂತಾಯಿತು.

ಸಂಜೆ ನನ್ನ ರೂಮ್ ಮೇಟ್ ಬಂದಾಗ ನಾನು ಮಾತನಾಡಿಸಿ ಪರಿಚಯಿಸಿಕೊಂಡೆ. ಮೊದಲನೇ ಈ ತರ ಹೊರಗಿದ್ದ ನನಗೆ ಧೈರ್ಯ ತುಂಬಿದರು.  ಒಂದೇ ರೂಮ್ ಅಲ್ಲಿ ವಿಜ್ಞಾನ ಸಾಹಿತ್ಯದ ಸಮಾಗಮಾವಾಗಿತ್ತು. ಅವರು ಭೌತಶಾಸ್ತ್ರದ ಬಗ್ಗೆ ಹೇಳುವರು, ನಾನು ಸಾಹಿತ್ಯದ ಕುರಿತು ಮಾತನಾಡುವಳು, ಅವರು ತುಂಬಾ ಮಾತನಾಡುವರು, ನಾವು ಮಾತನಾಡುವಾಗ ನಮಗೆ ಬಹುದಿನದಿಂದ ಪರಿಚಯವಿದೆಯೇನೊ ಎಂಬಂತೆ ಹರಟುವರು.

ನನಗೆ ಅಕ್ಕಂದಿರು ಇದ್ದರು, ಅವರೆಲ್ಲ ವಯಸ್ಸಿನಲ್ಲಿ ನನಗಿಂತ ಬಹಳ ದೊಡ್ಡವರಾಗಿದ್ದರಿಂದ ಅಂತಹ ಆತ್ಮೀಯತೆ ಇರಲಿಲ್ಲ, ಹಾಗಿರುವುದರಿಂದಾಗಿ ಈ ಅಕ್ಕನನ್ನು ನಾನು ತುಂಬಾ ಹಚ್ವಿಕೊಂಡೆ. ನಾವು ಬೆಸ್ಟ್ ಫ್ರೇಂಡ್ಸ್ ತರಹ ಇದ್ವಿ, ಸಂಜೆಯ ಹೊತ್ತಿನೊಂದಿಗೆ ನಾನು ಚಹಾ ತರುವುದೊರಳಗಾಗಿ ಅವರು ಬಿಸ್ಕತ್ತು ಅನ್ನು ಹೊರತೆಗೆದು ಇಡುತ್ತಿದ್ದರು, ಅವತ್ತು ಇಡೀ ದಿನ ಕಾಲೇಜಲ್ಲಿ ಏನು ಮಾಡಿದೆ ಎಂದು ಮಾತುಗಳು ಪ್ರಾರಂಭವಾಗುತ್ತಿದ್ದವು.

ಬರು-ಬರುತ್ತ ಪಿಜಿ ಮತ್ತಷ್ಟು ಆಪ್ತವಾಗುತ್ತಾ ಹೋಯಿತು, ನಮ್ಮ ನೆರೆಮನೆಯೆನೊ‌ ಎಂಬಂತೆ ಹಚ್ಚಿಕೊಳ್ಳುತ್ತಾ ಹೋದೆ, ನಮ್ಮ ಪಿಜಿ ಆಂಟಿಯನ್ನು ಅಂತೂ ತುಂಬಾ ಗೋಳ ಹೊಯ್ಕೊಂಡಿದೀವಿ, ಪಿಜಿ ಅಲ್ಲಿ ಎಲ್ಲ ಹಬ್ಬಗಳನ್ನು ಆಚರಿಸುತ್ತಿರುವದರಿಂದ, ಮನೆಯಲ್ಲಿ ಇರೋ ತರ ನಾವು ಇದ್ದಿದ್ದರಿಂದ ನಮಗೆ ಮನೆಯಿಂದ ನಾವು ದೂರ ಇದೀವಿ ಅಂತ ಅನ್ನಿಸುತ್ತಲೆ ಇರಲಿಲ್ಲ.

ಪಿಜಿ ಅಲ್ಲಿ ಆಡಿದ ಹೋಳಿ ಹಬ್ಬವನ್ನು ಅಂತು ಮರೆಯಲು ಸಾಧ್ಯವೇ ಇಲ್ಲ. ಪಿಜಿ ಅಲ್ಲಿ ಸಿಕ್ಕಂತ ಅನೇಕ ಸ್ನೇಹಿತರು, ಅಕ್ಕಂದಿರು ತಂಗಿಯರು, ಅದ್ರಲ್ಲಿ ನನ್ನ ರೂಮ್ ಮೇಟ್ಸ್ ಅಕ್ಕಂದಿರಾದ ಆಶಾ ಅಕ್ಕ ಹಾಗೂ ಕೋಮಲ್ ಅಕ್ಕ ನನ್ನ ಸ್ವಂತ ಅಕ್ಕಂದಿರಂತೆ ಆಗಿದ್ದಾರೆ, ಜೊತೆಗೆ ನನ್ನ ಹುಟ್ಟು ಹಬ್ಬದಂದೂ ನನಗೆ ಗೊತ್ತಾಗದಂತೆ ರೂಮ್ ಡೇಕೊರೇಷನ್ ಮಾಡಿ ಕೇಕ್ ತಂದು ಮಧ್ಯರಾತ್ರಿ ಹನ್ನೆರಡಕ್ಕೆ ವಿಷ್ ಮಾಡಿ ಸರ್ಪ್ರೈಜ್ ನೀಡಿದ್ದನ್ನಂತೂ ಮರೆಯೊಕೆ ಆಗುವುದಿಲ್ಲ, ಪಿಜಿ ಎಂಬ ನೆರೆ ಮನೆಯನ್ನು ಬಿಟ್ಟು ಹೋಗುವ ಸಂದರ್ಭ ಬಂದಿದೆ, ಇಲ್ಲಿ ಕಲಿತ ಹೊಸ ವಿಷಯ, ಹೊಸ ಭಾವ ಸಂಬಂಧಗಳೊಂದಿಗೆ ಸವಿ ನೆನಪಿನ ಖಜಾನೆಯೊಂದಿಗೆ ಹೊರಡುತ್ತಿದ್ದನೆ, ಈ ತರ್ಲೆ ತಂಗಿನ ಮರೆಯಬೇಡಿ ಅಕ್ಕಾ...

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ