ಪೋಸ್ಟ್‌ಗಳು

ಜೂನ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಂಗೀತಾಸಕ್ತರ ಮನಸೆಳೆದ “ಮುಂಜಾವು”

ಇಮೇಜ್
                                                 ಸಂಗೀತಾಸಕ್ತರ  ಮನಸೆಳೆದ “ಮುಂಜಾವು” ಇಂದಿನ ದಿನಮಾನದಲ್ಲಿ ಯುವಜನತೆಯು ಕಿರುಚಿತ್ರಗಳನ್ನು ನಿರ್ಮಿಸುವತ್ತ, ಸಂಗೀತದ(ಮ್ಯೂಸಿಕಲ್) ಆಲ್ಬಂಗಳನ್ನು ಹೊರ ತರುವಂತಹ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಿರುಚಿತ್ರಗಳನ್ನು ಮ್ಯೂಸಿಕಲ್ ವಿಡಿಯೋಗಳನ್ನು ಕ್ಯಾಮರಾದಲ್ಲಿ ಅಥವಾ ಮೊಬೈಲ್ ಕ್ಯಾಮರದಲ್ಲಿಯೇ ಚಿತ್ರಿಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾ ತಮ್ಮ ಪ್ರತಿಭೆಯನ್ನು ತೋರುತ್ತಿದ್ದಾರೆ. ಇತ್ತೀಚಿಗೆ ಕನ್ನಡದಲ್ಲಿ ಸಂಗೀತದಲ್ಲಿ ಒಳ್ಳೆಯ ಬದಲಾವಣೆ ಕಾಣುತ್ತಿದ್ದರೂ ಅದಕ್ಕೆ ಪೂರಕವಾದ ವಾತಾವರಣ ದೊರೆಯುತ್ತಿಲ್ಲ. ಬೇರೆ ಭಾಷೆಗಳಲ್ಲಿ ಒಖಿಗಿ uಟಿಠಿಟuggeಜ, ಛಿoಞe sಣuಜio, ಏಚಿಠಿಠಿಚಿ ಖಿvಯ  ಒusiಛಿ ಒoರಿo ನಂತಹ ಮುಂತಾದ ಆನ್‍ಲೈನ್ ವೇದಿಕೆಗಳು ಲಭ್ಯವಿವೆ. ಆದರೆ ಇಂತಹ ವೇದಿಕೆಗಳು ಕನ್ನಡದ ಮಟ್ಟಿಗೆ ಬಹಳ ಕಡಿಮೆ ಎಂದೇ ಹೇಳಬಹುದು. ಅಲ್ಲೊಂದು ಇಲ್ಲೊಂದು ಎನ್ನುವಂತೆ ಕೆಲವೊಂದಿಷ್ಟು ಯುಟ್ಯೂಬ್‍ನಂತಹ ಆನ್‍ಲೈನ್ ವೇದಿಕೆಗಳು ಬೆರಳೆಣಿಯೆಷ್ಟು ಮಾತ್ರ ಇವೆ. ಆದರೆ ಕೆಲವರು ಸ್ವಆಸಕ್ತಿಯಿಂದ, ಸಮಾಜಕ್ಕಾಗಿ ಹಾಗೂ ಮರೆತು ಹೋದಂತಹ ಹಳೆಯ ಹಾಡುಗಳನ್ನು ಮರುಸೃಷ್ಟಿಸುವುದಕ್ಕಾಗಿ ಜನರಲ್ಲಿ ಇನ್ನೂ ಹೆಚ್ಚಿನ ಸಂಗೀತದ ಅಭಿರುಚಿಯನ್ನು ಬೆಳೆಸುವುದಕ್ಕಾಗಿ ಕೆಲವೊಂದು ಮ್ಯೂಸಿಕ್ ಆಲ್ಬಂಗಳನ್ನು ಹೊರ ತರುತ್ತಾರೆ. ಅದೇ ರೀತಿ ಜನರ ಮನಸ್ಸು ಮುಟ್ಟುವಂತಹ, ಕೇಳುಗರಿಗೆ ಹಿ

ಕೆನ್ನೆ ಮೇಲೆ ಇಳಿಯುತ್ತಿದ್ದ ಕಣ್ಣೀರಿನ ಹೊರತಾಗಿ...!!

ಕೆನ್ನೆ ಮೇಲೆ ಇಳಿಯುತ್ತಿದ್ದ ಕಣ್ಣೀರಿನ ಹೊರತಾಗಿ...!! ಈ  ಬದುಕೆಂಬ ಪಯಣದಲ್ಲಿ ಅನಿರೀಕ್ಷಿತವಾಗಿ ಬರುವ ತಿರುವಗಳೆಷ್ಟೋ? ನಿಲ್ದಾಣಗಳೆಷ್ಟೋ? ನಡುವೆ ಬಂದು ಹೋಗುವ ಸಂಬಂಧಗಳೆಷ್ಟೋ? ಉಳಿಯುವ ಬಂಧಗಳೆಷ್ಟೋ? ಈ ಪಯಣದಲ್ಲಿ ಅತಿಯಾಗಿ ಹಚ್ಚಿಕೊಂಡವರನ್ನು ಕಳೆದುಕೊಂಡಾಗ, ಈ ಜಗತ್ತೇ ನಮಗೆ ಬೇಡ ಎಂದೆನಿಸಿಬಿಡುತ್ತದೆ. ಅವರು ನಮಗೆ ಅಷ್ಟೊಂದು ಆತ್ಮೀಯರಾಗಿರುತ್ತಾರೆ. ನನ್ನ ಬದುಕಿನ ಅಂತಹ  ಆತ್ಮೀಯರಲ್ಲಿ ಒಬ್ಬರು ನನ್ನಜ್ಜ. ನನ್ನಜ್ಜ ಯಾರಿಗೂ ತಾನು ಹೊರಡುವ ಸುಳಿವನ್ನು ನೀಡದೆ, ಭಗವಂತನ ದಾರಿಯತ್ತ ಹೆಜ್ಜೆ ಹಾಕಿದ್ದಾನೆ. ನಾನು ಊರಿಗೆ ಹೋಗುವ ಹಿಂದಿನ ದಿನವಷ್ಟೆ ಫೋನ್‍ನಲ್ಲಿ ಅಜ್ಜನ ಜೊತೆ ಹರಟೆ ಹೊಡೆದಿದ್ದ ನನಗೆ, ಇನ್ನೂ ಅಜ್ಜನೊಂದಿಗೆ ಮಾತನಾಡಲು ಆಗುವುದಿಲ್ಲ ಎಂಬ ಸತ್ಯವನ್ನು ಅರಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀನಿಲ್ಲದ ಮನೆ ಬಿಕೋ ಎನ್ನಿಸುತ್ತಿದೆ. ನೀನು ಕುಳಿತುಕೊಳ್ಳುತ್ತಿದ್ದ ಕುರ್ಚಿ ಖಾಲಿಯಾಗೇ ಉಳಿದಿದೆ. ನೀನು ಬಿಡಿಸುತ್ತಿದ್ದ ಪದಬಂಧದ ಅಕ್ಷರಗಳು ಸಹ ಮೌನವಾಗಿ ರೋಧಿಸುತ್ತಿವೆ. ನಾನು ಊರಿಗೆ ಬಂದಾಗಲೆಲ್ಲ, ಸಪ್ಪೆ ಅಡುಗೆ ತಿಂದು ಸಾಕಾಗಿದೆ, ಏನಾದರೂ ಸ್ಪೆಶಲ್ ಮಾಡಿಕೊಡು ಎಂದು ಹೇಳುತ್ತಿದ್ದ ಮಾತು ಕಿವಿಯಲ್ಲಿಯೇ ಗುಂಯಗುಡುತ್ತಿದೆ. ಜನ ಸತ್ತ ಮೇಲೆ ಎಲ್ಲಿಗೊಗ್ತಾರೆ? ಎಂದು ಸಣ್ಣವಳಿದ್ದಾಗ ನಾನು ಕೇಳಿದ ಮುಗ್ದ ಪ್ರಶ್ನೆಗೆ, ನೀನು ಅವರೆಲ್ಲ ನಕ್ಷತ್ರಗಳಾಗಿ ಹೊಳಿತಾರೇ ಎಂದು ಉತ್ತರ ನೀಡಿದ್ದೆ. ನನಗೊತ್ತು, ನೀನ

ಡಿಗ್ರಿ ಮುಗಿತು ಮುಂದೇನು?

ಇಮೇಜ್
ಡಿಗ್ರಿ ಮುಗಿತು ಮುಂದೇನು? ಆಗ್ಲೆ ಇಪ್ಪತ್ತೊಂದು ವರ್ಷಗಳಾದವಾ ನನಗೆ, ದಿನಗಳು ಹೇಗೆ ಉರುಳಿದವೊ ಅರಿವಿಗೆ ಬರಲೆ ಇಲ್ಲ. ಡಿಗ್ರಿ ಕೂಡ ಮುಗಿಯಿತು. ಸದ್ಯ ಜೀವನದ ಒಂದು ತಿರುವಿಗೆ ಸಾಕ್ಷಿಯಾಗಿ ಕನ್‍ಪ್ಯೂಜನ್‍ಗಳಲ್ಲಿ ಕಳೆದು ಹೋಗುತ್ತಿರುವೆ, ಭವಿಷ್ಯತ್ತಿನ ಚಿಂತೆ, ಏನೂ ಮಾಡಲಿ ಎನ್ನುವ ಗೊಂದಲ, ನನ್ನಿಷ್ಟದಂತೆ ಪತ್ರಿಕೋದ್ಯಮ ಕ್ಷೇತ್ರಕ್ಕೆ ಹೆಜ್ಜೆ ಇಡಲೆ ಅಥವಾ ಬೇರೆ ವಿಷಯ ತೆಗೆದುಕೊಳ್ಳಲೆ ಇವೆಲ್ಲವನ್ನೊ ನೋಡುತ್ತಿದ್ದರೆ ಯಾಕಾದರೂ  ಡಿಗ್ರಿ ಮುಗಿಯಿತೊ ಇನ್ನೊಂದು ವರ್ಷ ಡಿಗ್ರಿ ಕಲಿಯುವುದಕ್ಕೆ ಇರಬಾರದಾ ಎಂದನಿಸುತ್ತಿದೆ. ಡಿಗ್ರಿಯ ಸ್ನೇಹಿತರು ಇನ್ನೂ ಮುಂಚಿನಂತೆ ದಿನವೂ ಸಿಗುವುದಿಲ್ಲ. ಎಲ್ಲರಿಗೂ ಮುಂದೇನು ಎನ್ನುವ ಚಿಂತೆ. ಏನೇನೊ ಓದಬೇಕು ಕಲಿಯಬೇಕು ಎಂದುಕೊಂಡಿದ್ದ ಎಲ್ಲವೂ ನೆರವೆರುತ್ತಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಇಪ್ಪತ್ತೊಂದು ಯಾಕಾದರೂ ಆಗುತ್ತೋ, ಯಾಕಾದರೂ ಡಿಗ್ರಿ ಮುಗಿಯುತ್ತೊ? ಡಿಗ್ರಿ ಮುಗಿತು ಅಂದ್ರೆ ಸಾಕು ಹೆಣ್ಮಕ್ಕಳಿಗೆ ಮನೇಲಿ ವರಾನ್ವೇಷಣೆ ಕೆಲಸ ಪ್ರಾರಂಭವಾಗುತ್ತದೆ, ಹೆಣ್ಮಕ್ಕಳನ್ನು ಬಹು ಬೇಗ ಮನೆಯಿಂದ ದಾಟಿಸಿದರೆ ಸಾಕು ಜವಾಬ್ದಾರಿ ಮುಗಿಯುತ್ತದೆ ಎಂದು ಯಾಕೆ ಭಾವಿಸುತ್ತಾರೆ, ಅದೇ ಅರ್ಥವಾಗುವುದಿಲ್ಲ, ಜೀವನದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ನಿಜವಾದ ಧೈರ್ಯ, ಸಾಮಥ್ರ್ಯ ಈಗ ತಾನೇ ಮೂಡುವುದೊರಳೊಳಗಾಗಿ ಅವರನ್ನು ಬೇಗ ಗಂಡನ ಮನೆಗೆ ಕಳಿಸಿ ಬಿಡಬೇಕು ಎಂಬ ಚಿಂತನೆಯಲ್ಲಿ ಹೆತ್ತವರು.

ನನ್ನ ಪ್ರೀತಿಯ ಹುಡುಗಿಗೆ

ನನ್ನ ಪ್ರೀತಿಯ ಹುಡುಗಿಗೆ, ಊರಿಗೆ ಬಂದು ಎಷ್ಟೋ ದಿನಗಳೆ ಆಗಿದ್ದವು, ಊರಿಗೆ ಬಾರೋ ಎಂದು ಫೊನ್ ಮಾಡಿದಾಗೊಮ್ಮೆ ಅಮ್ಮ ಹೇಳುತ್ತಿದ್ದಳು ಸರಿ ಎಂದು ಪ್ಯಾಕ್ ಮಾಡಿಕೊಂಡು ಊರಿಗೆ ಬಂದೆ ಬಿಟ್ಟೆ. ನಿನ್ನ ಮದುವೆ ದಿನವೆ ಕೊನೆ ಮತ್ತೆ ಊರಿಗೆ ಹೋಗಿರಲೆ ಇಲ್ಲ. ಯಾಕೋ ಇವತ್ತು ನಿನ್ನ ನೆನಪು ತುಂಬಾ ಕಾಡ್ತಿದೆ ನಿನಗೆ ನನ್ನ ನೆನಪು ಕೂಡ ಇದೆಯೋ ಇಲ್ವೊ ಗೊತ್ತಿಲ್ಲ ಇರಬೇಕು ನೀನು ಗಂಡನೊಂದಿಗೆ ಆರಾಮಾಗಿ ಅನ್ಸುತ್ತೆ ನಿನಗೇನು ಗೊತ್ತು ನಾನಿಲ್ಲಿ ದಿನವೂ ನಿನ್ನ ನೆನಹುವಿನಲ್ಲಿ ಬೇಯುತ್ತಿರುವುದು. ನಿನ್ನದು ತಪ್ಪಿಲ್ಲ ಅನ್ಸುತ್ತೆ ನಮ್ಮ ನಡುವೆ ಅಡ್ಡವಾಗಿದ್ದು ಈ ಜಾತಿಯೆಂಬ ವಿಷಗೋಡೆ. ಕಡೆವರೆಗೂ ಜೊತೆಲಿರುವೆ ಎಂದು ಆಣೆ ಮಾಡಿ ನಡುವೆ ನನ್ನ ಬಿಟ್ಟು ಹೋಗುವೆಯೆಂದು ನಾನು ಕನಸಲ್ಲಿಯೂ ಕೂಡ ಊಹಿಸಿರಲಿಲ್ಲ. ಅವತ್ತು ಒಂದೇ ಒಂದು ಮಾತು ನಡೀ ಎಲ್ಲಾದರೂ ಹೋಗೋಣ ಬಾ ಜೊತೆಯಲಿ ಇರೋಣ ಎಂದು ಒಂದೇ ಒಂದು ಮಾತಿಗೋಸ್ಕರ ಕಾಯುತ್ತಿದ್ದೆ ಆದರೆ ನೀನು ಮಹಾ ಮೊಂಡು ಹೇಳಲೆ ಇಲ್ಲ ಹಾಗೆ ನನ್ನ ಮರೆತ ಬಿಡು ಎಂದು ಎಷ್ಟು ಸುಲಭವಾಗಿ ಹೇಳಿ ಹೋದೆ. ನಿನಗೊತ್ತಾ ಅವತ್ತಿಂದ ಕಣ್ಣಿಗೆ ನಿದ್ದೆ ಇಲ್ಲ ಕಣ್ಮುಚ್ಚಿದರೂ ತೆರೆದರು ನಿನ್ನ ನೆನೆಪೆ ನನ್ನ ಕಾಡುತ್ತಿತ್ತು. ಅದೆಷ್ಟು ಸುಲಭವಾಗಿ ನೀನು ನನ್ನ ಮರೆತು ಇನ್ನೊಬ್ಬನೊಂದಿಗೆ ಸಪ್ತಪದಿ ತುಳಿದು ಬಿಟ್ಟೆ ಅಲ್ಲ, ನಾನು ಕೂಡ ಬಂದಿದ್ದೆ ನಿನ್ನ ಮದ್ವೆಗೆ ಆದರೆ ನೀನು ನನ್ನೆಡೆಗರ ತಿರುಗಿಯೂ ನೋಡಲಿಲ್ಲ. ಕೈಯಲ್ಲಿದ್ದ ಅಕ್ಷತೆಯ

ಕಿರುಗತೆಗಳು

ಅವನು ಸದಾ ವಟಗುಡುವಂತಹ ಮಾತುಗಾರ, ಅವಳು ತುಟಿಯಲುಗಿಸದ ಮೌನಿ, ಅವರಿಬ್ಬರಿಗೂ ಸ್ನೇಹವಾಯಿತು ಅವಳು ಮಾತು ಕಲಿತಳು, ಅವನು ಮೌನಿಯಾದನು. ******* ಅವನು ಅಕ್ಷರ ಮೋಹಿ, ಅವಳು ಪುಸ್ತಕ ವ್ಯಾಮೋಹಿ ಅವರಿಗೆ ಪರಿಚಯವಾಯಿತು, ಸ್ನೇಹವಾಯಿತು, ಹಾಗೆಯೆ ಪ್ರೀತಿಯು ಆಯಿತು, ಒಟ್ಟಾದರು ಅವರ ಬದುಕಿಗ ಒಂದು ಕಾದಂಬರಿ. ******* ಅವನು ತುಟಿಯಂಚಿನಲ್ಲಿಯೆ ನಗುವ ಕನಸುಗಾರ, ಅವಳು ಅಪ್ಪಟ ವಾಸ್ತವವಾದಿ.ಎಷ್ಟೋ ಮಾತು- ಕತೆಗಳು ನಡೆದರು ಅವಳು ಅವನನ್ನು ಒಪ್ಪಲೆ ಇಲ್ಲ. ******* ಅವನು ಅವಳು ಪರಸ್ಪರ ಜಗಳವಾಡುತ್ತಿದ್ದರು, ನಮ್ಮಿಬ್ಬರ ನಡುವೆಯಿರುವುದು ಪ್ರೀತಿಯಂದು ಅವನು, ಅಲ್ಲ ಅದು ಸ್ನೇಹ ಎಂದಳವಳು, ಕಡೆಗೆ ಜಗಳ ಮುಕ್ತಾಯವಾಗಲೆ ಇಲ್ಲ. ******* ಅವಳೆಂದಳು ನೀ ಯಾಕೆ ನನ್ನ ಪ್ರೀತಿಸಿದೆ, ಯಾಕೆಂದೂ ಗೊತ್ತಿಲ್ಲ ಕಾರಣಗಳೇ ಇಲ್ಲ ಪ್ರೀತಿ ಹುಟ್ಟಲು ಎಂದು ತಣ್ಣಗೆ ಉತ್ತರಿಸಿದನು. ***** ಅವನು - ಕಾಮನಬಿಲ್ಲಿನಲ್ಲಿ ರಂಗು ಕಡಿಮೆಯಾಗಿದೆ. ಅವಳು - ಎಲ್ಲಿ ಎಲ್ಲ ಇದ್ದ ಹಾಗೆ ಇವೆಯಲ್ಲ ಅವನು - ಇಲ್ಲ ಅದು ನಿನ್ನ ಕಂಗಳಲ್ಲಿ ಅಡಗಿ ಕೂತಿದೆ. ******* ಅವನಿಗೆ ಬಹಳ ಬೇಜಾರಾದಗಲೆಲ್ಲ ಅವಳು ಅವನನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡು ಮುಂಗುರಳಲ್ಲಿ ಬೆರಳಾಡಿಸುವವಳು. ಅವಳಿಗೆ ಗೊತ್ತಿರಲಿಲ್ಲ ಅವಳ ಮಡಿಲಲ್ಲಿ ಮಲಗಬೇಕೆಂದು ಅವನು ಸುಳ್ಳು ಹೇಳುತ್ತಿದ್ದದ್ದು. ******* ಅವನು ಅವಳು ಇಬ್ಬರೂ ಅವಸರದಲ್ಲಿದ್ದರು, ಒಬ್ಬರಿಗೊಬ್ಬರು ಡಿಕ್ಕಿ ಹೊಡೆದರು, ಅ

ಒಂಟಿಯೊಲೆಯ ಗತ್ತು-ಗಮ್ಮತ್ತು

ಕಿವಿಗಳನ್ನು ಮತ್ತಷ್ಟು ಸಿಂಗರಿಸಲು, ಧರಿಸುವ ಬಟ್ಟೆಗಳಿಗೆ ತಕ್ಕಂತೆ ಅದಕ್ಕೆ ಮ್ಯಾಚ್ ಆಗುವ ರೀತಿಯಲ್ಲಿ ಕಿವಿಯೊಲೆಗಳನ್ನು  ಧರಿಸುವುದು ಸಹಜ. ಆದರೆ ಒಂದೇ ಕಡೆ ಮಾತ್ರ ಓಲೆಯನ್ನು ಧರಿಸಿ ಮಿಂಚುವುದು ಈಗಿನ ಹುಡುಗಿಯರ ಫ್ಯಾಷನ್. ಇದಕ್ಕೆ ಮೆರಗು ನೀಡುವಂತೆ ಒಂಟಿಯೊಲೆಗಳು ಸದ್ಯದ ಟ್ರೆಂಡ್ ಆಗಿವೆ. ಹೆಸರೇ ಹೇಳುವಂತೆ, ಇವು ಒಂದೇ ಕಡೆಯ ಕಿವಿಯಲ್ಲಿ ಮಾತ್ರ ಧರಿಸುವಂತೆ ಒಂದೇ ಕಿವಿಯೊಲೆ ಇರುತ್ತದೆ. ಇವು ಹಲವಾರು ವಿನ್ಯಾಸಗಳಲ್ಲಿ ಹಲವಾರು ರೀತಿಯಲ್ಲಿ ಇವು ಲಭ್ಯವಾಗುತ್ತವೆ. ಇವು ಉದ್ದನೆಯ ರಿಂಗ್, ಎಳೆಯಾಕಾರದ, ಸಣ್ಣ ಬೀಡ್ಸ್, ಸುರುಳಿಯಾಕಾರದಲ್ಲಿ, ಹಾಗೂ ಕಿವಿಯ ಹಿಂದೆ ಧರಿಸುವಂತೆ ಕಾಣುವ ಹಲವಾರು ಬಗೆ-ಬಗೆಯ ವಿನ್ಯಾಸಗಳಲ್ಲಿ ಇವು ಲಭ್ಯವಾಗುತ್ತವೆ. ಇಂತಹ ಕಿವಿಯೊಲೆಗಳು ಎಲ್ಲ ತರಹದ ಡ್ರೆಸ್ ಗಳ ಮೇಲೆಯೂ ಚಂದವಾಗಿ ಕಾಣುತ್ತವೆ, ಅದರಲ್ಲಿಯೂ ಗ್ರ್ಯಾಂಡ್ ಆದ ಚೂಡಿದಾರ್, ಘಾಗ್ರಾ, ಮಸ್ತಾನಿ ಡ್ರೆಸ್ ಗಳ ಮೇಲೆ ಧರಿಸಿದಾಗ ಇವು ನಿಮ್ಮನ್ನು ಮತ್ತಷ್ಟು ಅಂದಗಾಣಿಸುವುದರಲ್ಲಿ ಸಂಶಯವೇ ಇಲ್ಲ. ಕೇವಲ ಚೂಡಿ, ಘಾಗ್ರಾಗಳಿಗೆ ಮಾತ್ರವಲ್ಲದೆ, ಆಫೀಶಿಯಲ್, ಕ್ಯಾಜೂಯಲ್ ಹಾಗೂ ಜೀನ್ಸ್ ಮೇಲೆಯೂ ಇವನ್ನು ಧರಿಸಬಹುದಾಗಿದೆ. ಸದ್ಯಕ್ಕೆ ಇವು ಲಲನಾಮಣಿಯರ ಹಾರ್ಟ್ ಫೆವರಿಟ್. ಇವುಗಳನ್ನು ಧರಿಸಿದಾಗ ಇವು ನಿಮ್ಮ ಕರಣಗಳಿಗೆ ಮತ್ತಷ್ಟು ಮೆರಗು ತಂದು ಕೊಡುತ್ತವೆ. ಎರಡು ಕಡೆ ಕಿವಿಯೊಲೆ ಧರಿಸಿ ಬೇಜಾರಾಗಿದ್ರೆ ಈ ಒಂಟಿಯೊಲೆಯನ್ನು(Single earring) ಅನ್ನು ಧ

ಪಿಜಿ ಎಂಬ ಭಾವ-ಬೆಸುಗೆಯ ಮನೆಯೊಳಗೆ

ಕಾಲೇಜಿಗೆ ನ್ಯಾಕ್ ಬಂದ‌ ಸಂದರ್ಭ. ಕಾಲೇಜಿನಲ್ಲಿ ಕೆಲಸವನ್ನು ಮುಗಿಸಿ, ಬಸ್ ಅಲ್ಲಿ ನಮ್ಮೂರ ತಲಪೋದು ರಾತ್ರಿಯಾಗ್ತಿತ್ತು, ಅದಕ್ಕೆ ಹೊರಗಡೆ ಪಿಜಿ ಅಲ್ಲಿ ಇರುವೆ ಮನೆಲಿ ಹೇಳಿದಾಗ ಅವರು ಒಪ್ಪಿಗೆ ನೀಡಿ ಪಿಜಿಗೆ ಸೇರಿಸಿದರು. ನಾನು ಮೊದಲ ಬಾರಿ ಈ ಥರ ಹೊರಗಡೆ ಇರ್ತಾ ಇದ್ದಿದ್ದು, ನಾನು ವಿದ್ಯಾಭ್ಯಾಸಕ್ಕೆಂದು ಸಂಬಂಧಿಕರ ಮನೆಯಲ್ಲಿ ಇದ್ದರೂ ಕೂಡ ಈ ತರ ಪಿಜಿ ಅಲ್ಲಿ ರೂಮ್ ಅಲ್ಲಿ ಇರೋದು ಹೊಸ ಅನುಭವವಾಗಿತ್ತು. ಹೇಗಿರುತ್ತದೋ ಪಿಜಿ, ಊಟ ಹೇಗೆ ಕೊಡ್ತಾರೆ, ನನ್ನ ರೂಮಮೇಟ್ ಹೇಗಿರ್ತಾರೆ ಎಂಬೆಲ್ಲ ಅಳಕು ಮನದಲ್ಲಿ ಇಟ್ಟುಕೊಂಡು ಪಿಜಿಯ ವಾಸ್ತವ್ಯಕ್ಕೆ ಬಂದೆ. ನಾನು ಮೊದಲನೇ ಬಾರಿ ನನಗೆಂದು ಕೊಟ್ಟ ರೂಮಿಗೆ ಬಂದಾಗ, ರೂಮಲ್ಲಿ ಯಾರು ಇರಲಿಲ್ಲ, ಟೇಬಲ್ ಮೇಲೆ ವಿಜ್ಣಾನದ ಪುಸ್ತಕ, ಹಗ್ಗಕ್ಕೆ ನೇತು ಹಾಕಿದ ಬಟ್ಟೆ, ರೂಮನಲ್ಲಿಯೆ ಇದ್ದ ತೆಂಗಿನ ಮರ (ಮರ ಕಡಿಯದೆ, ಅದನ್ನು ಹಾಗೇ ಬಿಟ್ಟು ಕಟ್ಟಿಸಿದ್ದರು) ಇವೆಲ್ಲವೂ ಹೊಸದಾಗಿ ಬಂದ ನನಗೆ ಸ್ವಾಗತ ಕೋರಿದಂತಾಯಿತು. ಸಂಜೆ ನನ್ನ ರೂಮ್ ಮೇಟ್ ಬಂದಾಗ ನಾನು ಮಾತನಾಡಿಸಿ ಪರಿಚಯಿಸಿಕೊಂಡೆ. ಮೊದಲನೇ ಈ ತರ ಹೊರಗಿದ್ದ ನನಗೆ ಧೈರ್ಯ ತುಂಬಿದರು.  ಒಂದೇ ರೂಮ್ ಅಲ್ಲಿ ವಿಜ್ಞಾನ ಸಾಹಿತ್ಯದ ಸಮಾಗಮಾವಾಗಿತ್ತು. ಅವರು ಭೌತಶಾಸ್ತ್ರದ ಬಗ್ಗೆ ಹೇಳುವರು, ನಾನು ಸಾಹಿತ್ಯದ ಕುರಿತು ಮಾತನಾಡುವಳು, ಅವರು ತುಂಬಾ ಮಾತನಾಡುವರು, ನಾವು ಮಾತನಾಡುವಾಗ ನಮಗೆ ಬಹುದಿನದಿಂದ ಪರಿಚಯವಿದೆಯೇನೊ ಎಂಬಂತೆ ಹರಟುವರು. ನನಗೆ ಅಕ್ಕಂ