ಪೋಸ್ಟ್‌ಗಳು

ಮಾರ್ಚ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಇಮೇಜ್
ಅಪ್ಪ ಕೇವಲ ಎರಡು ಅಕ್ಷರವಾದರೂ ಅದರ ಹಿಂದಿರುವ ಭಾವ ಅಳೆಯಲಾಗದ್ದು. ಅಪ್ಪ ಪ್ರತಿಯೊಬ್ಬ ಹೆಣ್ಣು ಮಕ್ಕಳ ಹೀರೋ. ಅವ್ವನ ಮಡಿಲಲ್ಲಿ ಬೆಚ್ಚಗೆ ಇದ್ದವರಿಗೆ, ಅಪ್ಪನ ಹೆಗಲ ಕಾವು ಬೇಗನೇ ಅರ್ಥವಾಗುವುದಿಲ್ಲ. ಇದನ್ನು ಯಾಕೆ ಹೇಳುತ್ತಿದ್ದೆನೆಂದರೆ ನನ್ನ ವಿಷಯದಲ್ಲೂ ಹಾಗೇ ಆಗಿದ್ದು, ಅವ್ವನ ಮಡಿಲು ಸ್ಪಷ್ಟವಾಗಿ ಕಣ್ಮುಂದೆ ಇತ್ತು. ಆದರೆ ಅಪ್ಪನ ಹೆಗಲನ್ನು , ಆತನ ಭಾವ ತಿಳಿಯುವುದಕ್ಕೆ ಇಷ್ಟೊಂದು ಸಮಯ ಬೇಕಾಯಿತೆನೊ. ಮೊದಲಿನಿಂದಲೂ ಅಪ್ಪ ಬಿಗಿ ಮುಖದವನು. ಕೋಪ ಸದಾ ಮುಖದಲ್ಲಿ ಆಡುತ್ತಿತ್ತು. ಅದರ ಹಿಂದೆ ಮಕ್ಕಳು ಸರಿಯಾದ ದಾರಿಯಲ್ಲಿ ನಡೆಯಬೇಕೆಂಬ ಕಾಳಜಿಯಿತ್ತು. ಇಂದಿಗೂ ಇದೆ. ಅಂತಹ ಅಪ್ಪ ಇದೇ ಕಾರಣಕ್ಕೆನೋ ನನಗೆ ಬೇಗನೆ ಆಪ್ತವಾಗಲೇ ಇಲ್ಲ. ಅವ್ವನ ಮಡಿಲಲ್ಲೆ ಹೆಚ್ಚಾಗಿ ಬೆಳೆದ ನನಗೆ, ಅಪ್ಪ ಬಹು ಸುಲಭಕ್ಕೆ ಅರ್ಥವಾಗಲಿಲ್ಲ. ಬುದ್ದಿ ಬಲಿತಂತೆ ಅಪ್ಪನ ಕೋಪ,‌ಸಿಡುಕುಗಳ ಪರಿಚಯ, ಅದರ ಹಿಂದಿರುವ ಕಾಳಜಿ‌ ಮೆಲ್ಲ-ಮೆಲ್ಲನೆ ನನ್ನೊಳಗೆ ಅಡಿಯಿಡತೊಡಗಿತ್ತು. ಅಪ್ಪ ಅರ್ಥವಾಗತೊಡಗಿದ ಮೆಲ್ಲನೆ. ಅಪ್ಪ ಕಲಿಲಿಲ್ಲ. ಆದರೆ ತನ್ನ ಮಕ್ಕಳನ್ನು ಮಾತ್ರ ಚೆನ್ನಾಗಿ ಓದಿಸಿದ. ಅಪ್ಪನಿಗಿರುವ ತಿಳುವಳಿಕೆ, ಅನುಭವ ಅಪ್ಪನ ವಾರಿಗೆಯವರಿಗೂ ಇತ್ತೋ, ಇಲ್ವೋ ಗೊತ್ತಿಲ್ಲ. ಅಪ್ಪ ಕಲಿಯದೇ ಇದ್ದರೂ,ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲದೆ ಇದ್ದರೂ, ಕಾಶಿ, ದೆಹಲಿ ಹೀಗೆ ಅರ್ಧ ಭಾರತವನ್ನು ಸುತ್ತು ಹಾಕಿದ, ಜೊತೆಗೆ ಅವ್ವನನ್ನು ಕರೆದುಕೊಂಡು. ಒಮ್ಮೊಮ್ಮೆ ಅಪ್ಪನ

ಪೆದ್ಗುಂಡನಿಗೆ,

ಲೋ ಪೆದ್ದು, ಅದ್ಯಾವಾಗ ನಿನ್ನ ಕಡೆಗೆ ನನ್ನ ಮನ ಅರಿವಿಲ್ಲದೆ ಜಾರಿತೋ, ನನಗೆ ಅರಿವಿಲ್ಲ. ಮನದಲ್ಲಿ‌ ಹೇಳಲಾಗದ ಸಿಹಿಯಾದ ಸಂಕಟ. ಈ ಸಕ್ಕರೆಯ ನೋವು ಮತ್ತಷ್ಟು ಹೆಚ್ಚಾಗಲಿ, ನಿನಗೂ ಇದರ ಪುಳಕವಾಗಲಿ ಎಂಬ ಸಿಹಿ ಶಾಪ ನಂದು. ಯಾವಾಗ ನೋಡಿದರು ಮೊಗದಲ್ಲಿ ಮರೆಯಾಗದ ಸಣ್ಣ ಮುಗುಳು. ನಂಗೆ ಅಚ್ಚರಿ ಅದರ ಕುರಿತು, ಈ ನಗುವನ್ನು ನನಗೂ ಹೇಳಿ ಕೊಡು ಎಂಬ ಸಣ್ಣ ತಕರಾರಿದೆ. ಯೂನಿವರ್ಸಿಟಿಯ ಹಸಿರಂತೆ ನನ್ನನ್ನು ಪಟ್ಟನೆ ಚುಂಬಕ ಶಕ್ತಿಯಂತೆ ಸೆಳೆದು ಬಿಟ್ಟೆಯಲ್ಲ ಈ ತಪ್ಪಿಗೆ ಯಾವತ್ತಿಗೂ ಕ್ಷಮೆಯಿಲ್ಲ. ಪಟ ಪಟನೆ ಅರಳು ಹುರಿದಂತೆ ಮಾತನಾಡುವ ಆ ನಿನ್ನ ಗುಣ, ನಿನ್ನ ಮಗುತನ ಹೇಳ್ತಾ ಹೋದಂಗೆ ಪಟ್ಟಿ ಉದ್ದನೆ ಆಗುತ್ತೆ. ನಾ ಸೋತಿದ್ದು ಎಲ್ಲಿ ಬಲಗಡೆಯ ಕಣ್ಣಂಚಿನ ಪಕ್ಕದ ಸಣ್ಣ ಮಚ್ಚೆಗೋ, ತುಟಿಯ ಕೆಳಗೆ ಬಿಟ್ಟಿರುವ ಸಣ್ಣ ಕುರುಚಲು ಗಡ್ಡಕ್ಕೊ ಅದನ್ನ ನೀನೆ ವಿವರಿಸಬೇಕು. ಪ್ರೀತಿ - ಪ್ರೇಮ ಪುಸ್ತಕದ ಬದನೆಕಾಯಿ ಅಂತಿದ್ದವಳು, ಇದ್ಯಾವದು ನಂಗಿಷ್ಟ ಆಗೋಲ್ಲ ಅನ್ನುವವಳನ್ನ ಪ್ರೇಮದ ಬಲೆಗೆ ಕೆಡವಿದ್ದು ದೊಡ್ಡ ಅಪರಾಧ ಅದ್ಕೆ ನಿಂಗೆ ನನ್ನ ಯಾವತ್ತು ಬಿಟ್ಟು ಹೋಗಬಾರದು ಎನ್ನುವ ಆಜೀವ ಪರ್ಯಂತ ನನ್ನ ಹೃದಯದಲ್ಲಿ ನೆಲೆಸುವ ಪ್ರೀತಿಪೂರ್ವಕ ಶಿಕ್ಷೆಯನ್ನು ನೀಡಲಾಗುತ್ತದೆ. ಇದಕ್ಕೆ ನೀನು ಮುತ್ತಿನ ದಂಡ ತೆರುತ್ತೆನೆ ಎಂದರು ಬಿಡುಗಡೆ ಮಾತ್ರ ಖಂಡಿತಾ ಇಲ್ಲ. ನಾನು ನಿಂಗೆ ಯಾವತ್ತೂ ಹಾಗಿರಬೇಕು ಹೀಗಿರಬೇಕು ಎಂದು ಕಂಡಿಷನ್ಸ್ ಹಾಕೋಲ್ಲ. ಆದರೆ ನೀನು ಎಲ್ಲೇ ಇದ್

ಸರಳ ಕಥಾನಕದ, ವಿಶಿಷ್ಟ ಶೈಲಿಯ ಕರ್ವಾಲೋ

ಇಮೇಜ್
ನನಗೆ ಮೊದಲಿನಿಂದಲೂ ತೇಜಸ್ವಿ ನೆಚ್ಚಿನ ಲೇಖಕರು. ಅವರ ಪುಸ್ತಕಗಳ ಹೆಸರು ಬಹಳ ಮಜವಾಗಿರ್ತಾವೆ. ಪ್ಯಾಪಿಲಾನ್, ಕರ್ವಾಲೋ , ಮಿಸ್ಸಿಂಗ್ ಲಿಂಕ್ ಹೀಗೆ. ಒಂದು ದಿನ ಸಪ್ನಾಗೆ ಹೋದಾಗ ಕರ್ವಾಲೋ ಪುಸ್ತಕವನ್ನು ನೋಡಿ ಹೆಸರು ವಿಚಿತ್ರವಾಗಿದೆಯಲ್ಲ‌ ಎಂದುಕೊಳ್ಳುವಾಗ ತೇಜಸ್ವಿಯವರ ಹೆಸರನ್ನು ನೋಡಿ ಎದೆಗವಚಿಕೊಂಡು ತಗೊಂಡು ಬಂದಿದ್ದೆ. ತಂದ ದಿನವೇ ಒಂದೇ ಗುಕ್ಕಿಗೆ ಕೂತು ಓದಿ ಮುಗಿಸಿದ್ದೆ. ಓದಿದ ಮೇಲೆ ಪ್ರಕೃತಿಯ ಹೊಸ ಪ್ರಪಂಚವೇ ಕಣ್ಣಿಗೆ ತೆರೆದುಕೊಂಡಿತ್ತು. ಹೆಸರು ಕರ್ವಾಲೋ ಆದರೂ ಇದರಲ್ಲಿ ಬರುವ ಎಲ್ಲ‌ ಪಾತ್ರಗಳು ಕೂಡ ಬಹುಮುಖ್ಯವಾಗಿವೆ. ಮಂದಣ್ಣ, ಪ್ಯಾರ ಹೀಗೆ ಯಾವುದೇ ಹೆಸರಿಟ್ಟಿದ್ದರು ನಡೆಯುತ್ತಿತ್ತು. ಸರಳ ಕಥಾನಕದ, ಕಲ್ಪನೆಯೊಂದಿಗೆ ಪ್ರಕೃತಿ , ಜೀವನಾನುಭವ ಹೀಗೆ ಎಲ್ಲವೂ ಇಲ್ಲಿ ಮಿಳಿತವಾಗಿರುವದರಿಂದ ಕಾದಂಬರಿ ಮತ್ತಷ್ಟು ಆಪ್ತವಾಗುತ್ತದೆ. ಎಲ್ಲರಿಗೂ ಬಹು ಸುಲಭವಾಗಿ ತಿಳಿಯುವಂತೆ ಸರಳ, ಸುಲಭ ಶೈಲಿಯಲ್ಲಿ ಬರೆಯುವುದು ತೇಜಸ್ವಿಯವರ ವೈಶಿಷ್ಟ್ಯವೇ ಸರಿ. ಅದರಲ್ಲೂ ಮಂದಣ್ಣನ ಪಾತ್ರ ನನಗೆ ಬಹು ಇಷ್ಟವಾದ್ದು. ಪ್ಯಾರ, ಪ್ರಭಾಕರ, ಕರಿಯಪ್ಪ, ಕಿವಿ ನಾಯಿ ಹೀಗೆ ಎಲ್ಲರೊಂದಿಗೆ ಸಾಗುತ್ತಾ ಹೋಗುವ ಕಾದಂಬರಿ ಒಮ್ಮೆಲೆ ಜೀವ ವಿಕಾಸದತ್ತ ನಮ್ಮನ್ನು ಕೊಂಡೊಯ್ಯುತ್ತದೆ. ಮೂರರ ಮುಂದೆ ಏಳು ಸೊನ್ನೆಗಳಷ್ಟು ಹಿಂದಿನ ಹಾರುವ ಓತಿಯತ್ತ ನಮ್ಮನ್ನು ಸೆಳೆದೊಯ್ಯುತ್ತಾರೆ. ಮೂಡಿಗೆರೆಯಲ್ಲಿ ಸಾಗುವ ಕಥೆಯಲ್ಲಿ ಇಡೀ ಮಲೆನಾಡಿನ ಸೊಬಗನ್ನು ಅಕ್ಷರಶಃ ಪದಗ

ಶಿಶಿರ ಋತು ಕಾಡುವ ನೆನಪುಗಳ ಸಂತೆ..

ಇಮೇಜ್
ಶಿಶಿರ ಕಾಡುವ ನೆನಪುಗಳ ಸಂತೆ. ಮೆಲ್ಲನೆ ಚಳಿ ಅಡಿಯಿಡುವ ಹೊತ್ತದು. ಮುಸುಕಿನಲ್ಲಿ ಅವಿಸಿಕೊಳ್ಳುವ ಹೊತ್ತು, ಹಗಲು ಕಿರಿದಾಗಿ ಇರುಳು ದೊಡ್ಡದಾಗಿ ಕಾಣುವ ಹೊತ್ತದು. ಬೆಳಿಗ್ಗೆ ಏಳುವಾಗ ಇನ್ನಷ್ಟು ಹೊತ್ತು ಕತ್ತಲಾಗೇ ಇರಬಾರದೆ ಎಂದು ಮುಸುಕೆಳದುಕೊಂಡು ಕನವರಿಸುವ ಘಳಿಗೆ. ಶಿಶಿರವೆಂದರೆ ಮಂಜಲ್ಲಿ ಕಳೆದು ಹೋಗುವ ಹೊತ್ತು. ಸುಗ್ಗಿ ಮುಗಿಯುವ ಹೊತ್ತು. ರಸ್ತೆಯ ಮೂಲೆಯಲ್ಲಿರುವ ಬುಡ್ಡಣ್ಣನ ಟೀ ಅಂಗಡಿಯಲ್ಲಿ ಬಿಸಿ-ಬಿಸಿ ಮಿರ್ಚಿ, ಬಜಿ ಖರ್ಚಾಗುವ ಹೊತ್ತು. ನವವಿವಾಹಿತರಿಗೆ, ಪ್ರೇಮಿಗಳಿಗೆ ಅರೆ ಘಳಿಗೆಯು ಕನಸನ್ನು ಕನವರಿಸುತ್ತಿರುವ ಹೊತ್ತು, ಶಿಶಿರ ಹೀಗೆ ಹಲವಾರು ನೆನಪುಗಳನ್ನು ಹೊತ್ತುಕೊಂಡು ತರುವ ಹೊತ್ತು. ನಯವಾದ ಮೈ, ಕೈ-ಕಾಲುಗಳು, ತುಟಿಯು ಸಣ್ಣದಾಗಿ ಒಡೆದು ಬಿರುಕು ಮೂಡಲಾರಂಭಿಸಿದಾಗ ಅರಿವಾಗೋದು ಶಿಶಿರ ಮೆಲ್ಲ ಅಡಿಯಿಟ್ಟಿದೆ ಎಂದು, ಈ ಸಮಯಯ ಮುಂಚಿನಂತೆಯೆ ಕೆಲಸ ಲಘು- ಬೇಗನೆ ಸಾಗುವುದಿಲ್ಲ,ಚಳಿಯ ಕಂಪನಕ್ಕೆ ನಡು-ನಡುವೊಮ್ಮೆ ಬಿಸಿ ಚಹಾವನ್ನು ಮೆಲ್ಲನೆ ಗುಟುಗುರಿಸುತ್ತಿರಬೇಕು. ಶಿಶಿರದಲ್ಲಿ ತುಂಬಿದ ಬಸುರಿಯ ಹಾಗಿರುವ ಮರವೊಂದು ಒಮ್ಮೆಲೆ ಎಲೆಯುದುರಿ ಪಳೆಯುಳಿಕೆಯಂತಾಗಿ ರಸ್ತೆಯಲ್ಲೆಲ್ಲ ಎಲೆಗಳದೇ ಪಟ- ಪಟನೇ ಸದ್ದು, ಹಣ್ಣೆಲೆ ತಾನು ಉದುರಿ ಚಿಗುರೆಲೆ ಚಿಗುರಲು ಅವಕಾಶ ಕಲ್ಪಿಸುತ್ತಿದೆ. ಇದೇ ಅಲ್ಲವೇ ಪ್ರಕೃತಿಯ ನಿಯಮ, ಹಳೆಯದೆಲ್ಲ ಕಳೆದು ಹೋಗಿ ಹೊಸತನಕ್ಕೆ ಅವಕಾಶ ಕೊಡುವುದು. ಮುಂಜು ಮುಸುಕಿಕೊಂಡಿರುವ ರಸ್ತೆಗಳು, ಹಗಲಿನಲ್ಲ