ಪೋಸ್ಟ್‌ಗಳು

ಜುಲೈ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಥ್ರಿಲ್ಲರ್ ಕಥೆಗಳು

ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹೆಂಡತಿಯು ಅನಾರೋಗ್ಯದಿಂದ ತೀರಿಕೊಂಡಾಗ ಅವಳ ಚಿತೆಗೆ ಬೆಂಕಿ ಕೊಟ್ಟು, ಸಮುದ್ರ ತೀರದಲ್ಲಿ ಒಂಟಿಯಾಗಿ ಕೂತವನು ಎದ್ದು ಹೊರಟ. ಅವನ ಹೆಜ್ಜೆಯ ಪಕ್ಕದಲ್ಲಿ ಮತ್ತೆರಡು ಹೆಜ್ಜೆಗಳು ಮೂಡಿ ಮರೆಯಾಗುತ್ತಿದ್ದವು. ****************** ಅಪಾರ್ಟ್ಮೆಂಟಿನ ಮನೆಯೊಂದರಲ್ಲಿ ಒಬ್ಬ ತಾಯಿ ಹಾಗೂ ಸಣ್ಣ ಮಗು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಮುಚ್ಚಿಟ್ಟು ಬ್ರೋಕರ್ ಆ ಗಂಡ- ಹೆಂಡತಿಯರಿಗೆ ಆ ಮನೆಯನ್ನು ಕೊಂಡುಕೊಳ್ಳುವಂತೆ ಮಾಡಿದ್ದ. ಈಗ ಆ ದಂಪತಿಗಳಿಗೆ ದಿನಾ ರಾತ್ರಿ ಮಗು ಅಳುತ್ತಿರುವಂತೆ, ತಾಯಿ ಅದನ್ನು ಸಂತೈಸುವಂತಹ ಶಬ್ದ ಕೇಳಿಸುತ್ತದೆ. ****************** ಕಾವ್ಯ ಹಾಗೂ ರಮ್ಯ ಜೀವದ ಗೆಳತಿಯರು. ಕಾವ್ಯ ಅವಘಡಕ್ಕೆ ತುತ್ತಾಗಿ ಸಣ್ಣ ವಯಸ್ಸಿನಲ್ಲಿಯೇ ಅಕಾಲ ಮರಣ ಹೊಂದಿದಳು. ಅದಾದ ಸ್ವಲ್ಪ ದಿನದಲ್ಲಿಯೇ ರಮ್ಯ, ಕಾವ್ಯಳಂತೆ ನಡೆದುಕೊಳ್ಳತೊಡಗಿದಳು. ಡಾಕ್ಟರ್ ರಮ್ಯಳನ್ನು ಪರೀಕ್ಷಿಸಿದರು. 'ಕಾವ್ಯಳ ಅಗಲಿಕೆಯೇ ರಮ್ಯಾಳ ಈ ವರ್ತನೆಗೆ ಕಾರಣ' ಎಂದು ಡಾಕ್ಟರ್ ಹೆತ್ತವರ ಹತ್ತಿರ ಹೇಳುತ್ತಿದ್ದರೆ, ರಮ್ಯಾ 'ನನ್ನ ಗೆಳತಿಯನ್ನು ಬಿಟ್ಟಿರಲಾಗಲಿಲ್ಲ. ಅದಕ್ಕೆ ಅವಳ ಹತ್ತಿರ ಬಂದಿದ್ದೀನಜ' ಎಂದು ಬಡಬಡಿಸುತ್ತಿದ್ದಳು.

ಅದೇ, ಆ ಹುಡುಗ - ಹುಡುಗಿ...

ಕಾಲೇಜಿಗೆ ಬೇರೆ ಲೇಟ್ ಆಗಿತ್ತು. ಸ್ವಲ್ಪ ಲೇಟಾಗಿ ಎದ್ದಿರುವುದೇ ನನ್ನ ಅವಸರಕ್ಕೆ ಕಾರಣವಾಗಿತ್ತು. ಬೆಳಿಗ್ಗೆ ಇರುವುದು ಒಂದೇ ಬಸ್ಸು, ಅದನ್ನ ಮಿಸ್ ಮಾಡ್ಕೋಬಾರದು ಅಂತ ಹೇಗೋ ರೆಡಿಯಾಗಿ ಬಸ್ ಸ್ಟ್ಯಾಂಡ್ ಗೆ ಬರೋ ಅಷ್ಟೊತ್ತಿಗೆ ಕರೆಕ್ಟಾಗಿ ಬಸ್ಸು ಬಂತು. ಅದು ಕೂಡಾ ಲೇಟಾಗಿ ಬಂದಿತ್ತು. ನನ್ನ ಅದೃಷ್ಟ ಚೆನ್ನಾಗಿದೆ ಎಂದುಕೊಳ್ಳುತ್ತಾ ಸಿಕ್ಕಿದ್ದ ಒಂದು ಸೀಟಿಗೆ ತಲೆಯನ್ನು ಒರಗಿಸಿದ್ದೆ. ನನ್ನ ಪಕ್ಕದಲ್ಲಿ ಕುಳಿತಿದ್ದ ಒಬ್ಬ ಹುಡುಗ ಎದುರಿಗೆ ನಿಂತಿದ್ದ ಒಂದು ಹುಡುಗಿ,‌ಅವರಿಬ್ಬರು ಪರಸ್ಪರ ಯಾರಿಗೂ ಗೊತ್ತಾಗದಂತೆ ಕಣ್ಣು-ಕಣ್ಣಲ್ಲೆ ಆಂಗಿಕಾಭಿನಯ ಮಾಡುತ್ತಾ ಮೂಕ ಸಂಭಾಷಣೆಯನ್ನು ನಡೆಸುತ್ತಿದ್ದರು. ನಾನು ಅದನ್ನು ಕಳ್ಳ ಬೆಕ್ಕಿನಂತೆಯೇ ಕದ್ದು ಇಣುಕಿ ನೋಡುತ್ತಿದ್ದೆ. ಅವಳನ್ನು ನೋಡುತ್ತಾ ಅವನು ನಗುತ್ತಿದ್ದ. ಅವನ ನಗೆ ತನಗೂ ಒಪ್ಪಿಗೆಯೆಂಬಂತೆ ಅವಳು ಪ್ರತಿಯಾಗಿ ತನ್ನ ನಗೆಯನ್ನು ಅವನೆಡೆಗೆ ಎಸೆಯುತ್ತಿದ್ದಳು. ಅವರಿಬ್ಬರ ಈ ಕಣ್ಕಟ್ಟು ಆಟವನ್ನು ನಾನು ನನ್ನ ಕಿರುಗಣ್ಣಿನಲ್ಲಿಯೆ ನೋಡುತ್ತಾ ಮುಂದೆನಾಗುತ್ತೋ ಅಂತ ಅವರನ್ನೇ ಗಮನಿಸುತ್ತಲಿದ್ದೆ. ಅವರು ಆ ನಗುವಿನಲ್ಲಿಯೇ, ಕಣ್ಣು-ಕಣ್ಣುಗಳಲ್ಲಿಯೇ ಮಾತನಾಡುತ್ತಾ, ಅವನ ನಗುವಿಗೆ ಅವಳು ನಾಚುತ್ತಾ ನಿಂತಿದ್ದಳು. ಅವರಿಗೆ ಪರಸ್ಪರ ಮಾತನಾಡುವಾಸೆ. ಆದರೆ, ಈ ಬಸ್ ಏಕೋ ಅವರಿಗೆ ಸಾಥ್ ಕೊಟ್ಟಿರಲಿಲ್ಲ. ಬಸ್ ನಲ್ಲಿ ಮಾತನಾಡುವುದು ತರವಲ್ಲವೆಂದು ಅರ್ಥೆಸಿಕೊಂಡ ಅವರು, ಮಾತನಾಡದೆ ನಗುವಿನಲ್ಲಿಯೆ

ಮರೆತು ಹೋದ ಹುಡುಗನಿಗೆ,

ಮರೆತು ಹೋದ ಹುಡುಗನಿಗೆ, ಹೇಗಿದ್ದಿಯೋ ಹುಡಗಾ, ಹೇಗಿದ್ದಿಯಾ ಎಂದೂ ಕೇಳುವುದಕ್ಕೆ ನನಗೆ ಅರ್ಹತೆ ಇಲ್ಲ ನನ್ನ ನಂಬಿಸಿ ಮೋಸ ಮಾಡಿದವಳು ನೀನು ಎಂದು ಅಂದಕೊಂಡಿರಬೇಕು ನೀನು, ಆದರೆ ನಿ‌ನ್ನ ಮರೆಯೋಕೆ ಆಗದೆ ಮನಸ್ಸಲ್ಲೆ ಇಟ್ಟುಕೊಂಡು ಎಷ್ಟು ಒದ್ದಾಡುತ್ತಿರುವೆ ಎಂದು ನಿನಗೇನೊ ಗೊತ್ತು?? ಎಲ್ಲೋ ಬೆಂಗಳೂರು ಅಲ್ಲಿ ಕೆಲಸ ಮಾಡ್ತುದೀಯಾ ಎಂದು ಗೊತ್ತಾಯ್ತು, ಮದ್ವೆ ದಿನ ಬಂದಿದ್ದೆ ನನ್ನ ಕಂಗಳು ನಿನ್ನೆ ಹುಡ್ಕಿದ್ದವು ಆದರೆ ನೀ ನನ್ನ ಕಡೆ ನೋಡ್ಲೆ ಇಲ್ಲ. ನಿನ್ನ ತೋಟದ ಕಡೆಯಿಂದ ಭೇಟಿ ಮಾಡಿ ಬರೋವಾಗ ನಮ್ಮಪ್ಪ ನಿನ್ನ ಜೊತೆ ಇದ್ದಿದ್ದನ್ನ ನೋಡಿಬಿಟ್ಟರು, ಮನೆಯಲ್ಲಿ ರಂಪ-ರಾದ್ಧಂತ ಅತ್ತು ಕರೆದೆ ಏನು ಮಾಡಿದರು ಯಾರು ಕರಗಲಿಲ್ಲ, ಅಡ್ಡವಾಗಿದ್ದು ಬೇರೆ ಏನು ಅಲ್ಲ ಈ ಜಾತಿ, ಈ ಜಾತಿ ಅನ್ನೋದು ಇಲ್ಲದೆ ಹೊಗಿದ್ರೆ ನನ್ನ ನಿನ್ನ ಬೇರೆ ಮಾಡೋಕೆ ಯಾರಿಂದನೂ ಸಾಧ್ಯ ಆಗ್ತಿರಲಿಲ್ಲ. ಮನೇಲಿ ನೀ ಅವನನ್ನ ಮರೆತು ಈ ಮದ್ವೆಗೆ ಒಪ್ಪಿದ್ರೆ ಸರಿ ಇಲ್ಲದೆ ಇದ್ದರೆ ನನ್ನ, ನಿಮ್ಮ ಅವ್ವನ ಇಲ್ಲೇ ಮರ್ತ ಬಿಡು ಎಂದು ಅಪ್ಪಯ್ಯ ಅಂದಾಗ, ಯಾವ ಬಾಯಿಯಿಂದ ಇಲ್ಲ ಅನ್ಲೀ ಹೇಳು, ಅಪ್ಪಯ್ಯ ಏನೋ ಸಿಕ್ಕಿದ್ದ ಒಂದ ಗಂಡ ಜೊತಿ ನನ್ನ ಮದ್ವಿ ಮಾಡಿ ಕಳಿಸಿ ಬಿಟ್ರು, ನನ್ನ ಒಪ್ಪಿಗೆ ಕೇಳಲಿಲ್ಲ, ನನ್ನ ಇಷ್ಟ ಇದೆಯೋ ಇಲ್ವೊ ಅನ್ನಲಿಲ್ಲ, ಅವರಿಗೆ ಹೆತ್ತ ಮಗಳಿಗಿಂತ ಮನೆತನದ ಮರ್ಯಾದೆ ಉಳಿಸಿಕೊಳ್ಳೊದೆ ಮುಖ್ಯ ಆಗಿತ್ತು. ಪ್ರೀತಿಸಿದವನ ಮರೆಯೊಕೆ ಆಗದೆ ಹೇಗೊ ತಾಳಿ ಕಟ್ಟಿದವನ ಋ