ಪೋಸ್ಟ್‌ಗಳು

ಆಗಸ್ಟ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಸ್‍ಸ್ಟ್ಯಾಂಡ್‍ನ ಬಿಡಿ-ಬಿಡಿ ಭಾವಗಳು...

ಅದು ನಗರದ ಪ್ರಮುಖ ಸ್ಥಳ. ನೂರಾರು ಜನರು ಅಪರಿಚಿತರು ಅಲ್ಲಿ ಸೇರುತ್ತಾರೆ. ಅಲ್ಲಿ ಎಷ್ಟೋ ಜನ ಉದ್ಯೋಗ ಕಂಡುಕೊಂಡಿದ್ದಾರೆ. ಹಲವಾರು ಭಾವಗಳಿಗೆ ಆ ಸ್ಥಳ ಸಾಕ್ಷಿಯಾಗಿದೆ. ಅದು ಯಾವದು ಎಂದು ಯೋಚನೆ ಮಾಡುತ್ತಿರುವೀರಾ ಅದು ನಗರದ ಪ್ರಮುಖ ಬಸ್‍ಸ್ಟ್ಯಾಂಡ್. ಎಲ್ಲೆಲ್ಲಿಂದಲೋ ಬರುವ ಜನರಿಗೆ ನೆಲೆಯಾಗಿದೆ. ಹಲವಾರು ಜನರಿಗೆ ಆಸರೆ ನೀಡಿದೆ. ಕಂಡು ಕಾಣದಂತೆ ಕೆಲವೊಂದನ್ನು ತನ್ನ ಮಡಿಲಲ್ಲಿಯೆ ಅವಿತಿಸಿಕೊಂಡಿದೆ. ಹುಡುಕಲು ಹೊರಟರೆ ನೂರಾರು ಭಾವಗಳು ಕಣ್ಮುಂದೆ ಪೊರೆಯುತ್ತವೆ. ಸೂರ್ಯ ಇನ್ನೂ ತನ್ನ ನಿದ್ದೆಯಿಂದ ಎಚ್ಚೆತ್ತುಕೊಳ್ಳುವ ಮುಂಚೆಯೇ ಬಸ್‍ಸ್ಟ್ಯಾಂಡ್‍ನಲ್ಲಿ ಆಗಲೇ ಕೆಲಸದ ತಯಾರಿಯು ಪ್ರಾರಂಭವಾಗಿರುತ್ತದೆ. ನಸುಕಿನಲ್ಲಿಯೆ ಸವಿನಿದ್ದೆಯಲ್ಲಿಯೇ ಊರಿಗೆ ಕಾಲಿಡುವ ಪ್ರಯಾಣಿಕರಿಗಾಗಿ, ಥಂಡಿಯನ್ನು ಹೋಗಲಾಡಿಸಲು, ಕಂಡಕ್ಟರ್, ಡ್ರೈವರ್‍ಗಳನ್ನು ವಿಚಾರಿಸುತ್ತ ಚಾಯ್ ಚಾಯ್ ಎಂದು ಕೂಗುತ್ತ ಚಾಯ್‍ವಾಲ ಒಬ್ಬ ಬಹುಬೇಗ ಪರಿಚಿತನಾಗುತ್ತಾನೆ. ಗಾಳಿಯಲ್ಲಿ, ಬಸ್ಸಿನಲ್ಲಿ ಬಂದಿರುವ ಕಾರಣಕ್ಕೆ ಮರುಟಿರುವ ಕೈಗಳನ್ನು ಬೆಚ್ಚಗೆ ಮಾಡಿಕೊಳ್ಳಲು, ಚಾಯ್‍ವಾಲಾನ ಪೂರ್ವಾಗ್ರಹವನ್ನು ವಿಚಾರಿಸುತ್ತಾ ಇನ್ನೊಂದು ಟೀ ಕುಡಿದಾಗಲೇ ಸಮಾಧಾನ. ಹೊತ್ತು ಸರಿಯುತ್ತಾ ಹೋದಂತೆ ಬಸ್‍ಸ್ಟ್ಯಾಂಡ್ ಮತ್ತಷ್ಟು ಕಳೆಗಟ್ಟುತ್ತಾ ಹೋಗುತ್ತದೆ. ಬಸ್ಸಿನಲ್ಲಿ ಬರುವ ಪೇಪರ್ ಬಂಡಲ್‍ಗಳನ್ನು ಇಳಿಸಿಕೊಳ್ಳುತ್ತಾ, ಅವುಗಳನ್ನು ಹೊಂದಿಸಿಕೊಳ್ಳುತ್ತಾ, ಎಲ್ಲೆಲ್ಲಿಗೆ ಎಷ್ಟೆಷ್ಟು

ಹಂಪಿ

ಒಂದಾನೊಂದು ಕಾಲದಲ್ಲಿ ಸೇರಲ್ಲಿ ಮುತ್ತು-ರತ್ನಗಳನ್ನು ಮಾರುತ್ತಿದ್ದರಂತೆ, ಇತಿಹಾಸವನ್ನು ಕಂಡವರಾರು ನಾವು ನೋಡಿದ್ದೆವೆ ಇತಿಹಾಸವನ್ನು ತಲೆ ತಲೆಗಳಿಂದ ಹರಿದು ಬಂದ ಮಾತಿನಲ್ಲಿ.. ಅವರಿವರು ಬರೆದ ಹೊತ್ತಿಗೆಯಲ್ಲಿ ಈಗ, ಆಗಿನ ಗತವೈಭವವಾಗಿ ಮೆರೆದಿದ್ದಕ್ಕೆ ಸಾಕ್ಷಿಯಾಗಿ ಉಳಿದಿವೆ ಅಳಿದುಳಿದ ಕಲ್ಲುಬಂಡೆಗಳು ಆಗಿನ ಇತಿಹಾಸವೇ ಈಗಿನ ಹಣದ ಮೂಲ ಈಗಿನ ಖಾಲಿ ರೋಡುಗಳು ಕಲ್ಲುಬಂಡೆಗಳು ಮೌನವಾಗಿಯೆ ತಮ್ಮ ಕಥೆಯನ್ನು ಹೇಳುತ್ತಿವೆ ಶಿಲ್ಪಗಳ ಅಳಿದುಳಿದ ಕಲೆಗಳು ತಮ್ಮ ಮೇಲೆ ನಡೆದ ದೌರ್ಜನ್ಯಕ್ಕೆ ಸಾಕ್ಷಿಯೆಂಬಂತೆ ನಿಂತಿವೆ ಈಗಿನ ಕೊಂಪೆಗೂ ಆಗಿನ ಹಂಪೆಗೂ ಎಷ್ಟೊಂದು ವಾಸ್ತವ, ವ್ಯತ್ಯಾಸ ರಾಜೇಶ್ವರಿ ಲಕ್ಕಣ್ಣವರ

ಬಸ್ಸಿನಲ್ಲೊಂದು ಕಥನ

ಕಿಟಕಿಯ ಬದಿಯಲ್ಲಿ ಕೂತ ಕನಸು ಕಂಗಳ ಪೋರನೊಬ್ಬ ಹೊಸದೆನನ್ನೊ ನೋಡುವಂತೆ ಆಚೆ ಬಯಲನ್ನು ಎವೆಯಿಕ್ಕದೆ ನೋಡುತ್ತಿದ್ದಾನೆ.. ಬೊಕ್ಕ ತಲೆಯ, ಬೊಚ್ಚು ಬಾಯಿಯ ಹಿರಿದೆಲೆಯ ಅಜ್ಜನೊಬ್ಬ ಚಿಗುರಲೆಯ ತನ್ನ ಮೊಮ್ಮಗನೊಂದಿಗೆ ಹರಟಲು ಪ್ರಯತ್ನಿಸುತ್ತಿದ್ದೆ ಮೊಮ್ಮಗನ ಕಣ್ಣುಗಳು ಐದು ಇಂಚಿನ ಟಚ್ ಸ್ಕ್ರೀನ್ ಪರದೆಯ ಮೇಲೆ ನೆಟ್ಟಿವೆ.. ಅವನ ಹಿಂಬದಿ ಸೀಟಿನವನೊಬ್ಬ ಆಗಾಗ ಎಲೆ-ಅಡಿಕೆ ಜಗಿಯುತ್ತಾ ಒಂದೊಂದು ಊರಿನ ಸ್ಟಾಪು ಬಂದಾಗಲೆಲ್ಲ ಕಿಟಕಿಯ ಹೊರಗೆ ಇಣುಕಿ ನೆಲದ ಮೇಲೆ ಕೆಂಪು ಪಿಚಕಾರಿ ಮೂಡಿಸುತ್ತಿದ್ದಾನೆ.. ಕಂಡಕ್ಟರ್ ಈ ಕುರಿಯ ಮಂದೆಯಂತಹ ಬಸ್ಸಿನಲ್ಲಿ ಟಿಕೇಟ್ ಕೊಡಲು ಹರಸಾಹಸ ಮಾಡುತ್ತಿದ್ದಾನೆ.. ಯಾವ ಯಾವ ಊರಿನವರು ಪಕ್ಕ ಪಕ್ಕದಲ್ಲಿ ಕುಳಿತು ಅವರವರ ಕ್ಷೇಮ--ಸಮಾಚಾರ ವಿಚಾರಿಸುತ್ತಿದ್ದಾರೆ.. ಇದು ದಿನನಿತ್ಯ ಮುಗಿಯದ ಕಥೆ ಎಂದು ಡ್ರೈವರ್ ಬಸ್ಸಿನ ಶಿಳ್ಳೆಯನ್ನು ಜೋರಾಗಿ ಅಮಕುತ್ತಾನೆ.. ರಾಜೇಶ್ವರಿ ಲಕ್ಕಣ್ಣವರ

ಗೌರಿ ಹಬ್ಬ

ಕಾಯುತಿಹಳು ತಂಗಿ ಹೊಸ್ತಿಲ ತುದಿಯಲ್ಲಿ ನಿಂತು ಹಬ್ಬ ಬಂತು ಅಣ್ಣ ಯಾಕ ಕರೆಯಾಕ ಬಂದಿಲ್ಲ ಎಂದು ಹಬ್ಬ ಬಂದೈತಿ ಬಾಗಿನ ಉಡಿ ತುಂಬಕೊಂಡು ನನ್ನನ್ನು ಬೆಳೆಸಿದ ತವರಿಗೆ ಹರಸುವುದು ಐತಿ ಉಡೂಗೊರೆ ತೆಗೆದುಕೊಳ್ಳೊದು ಐತಿ ಇನ್ನೂ ಯಾಕ ಬರತಿಲ್ಲ ಅಣ್ಣ ಎಲ್ಲರಿಗೂ ಸಿಹಿ ಹಂಚೋದು ಐತಿ ನಾ ಹಚ್ಚಿದ ಮೊಲ್ಲೆಯ ಗಿಡ ಎಷ್ಟ‌ ಬೆಳೆದತಿನ..? ಹಿತ್ತಲಲ್ಲಿ ಕಟ್ಟಿದ ಜೇನುಗೂಡು ಜೇನು ಬಿಟ್ಟಿದೆಯೆನು..? ಅವ್ವ ನಿನಗಿಷ್ಟವಾದ ಕೆಂಪು ಜರತಾರಿ ಸೀರೆನೆ ತಂದೆನಿ ಎಂದಾಳ ಎಲ್ಲಿರುವನೋ ಅಣ್ಣ ಬಂದ ನಮ್ಮ ಅಣ್ಣ ಅದೋ ಮೂಲೆಯಲ್ಲಿ ಕಾಣಾಕತ್ತಾನಾ ನಾ ಹೊಂಟೆ ಹಬ್ಬಕ್ಕೆ ನಮ್ಮ ಅಣ್ಣನ ಜೊತೆ ತವರಿಗೆ ದಾರಿಯಲ್ಲೆಲ್ಲಾ ಮಲ್ಲಿಗೆಯ ಕಂಪು ಹರಡೆತಿ ಅರಿಶಿಣ-ಕುಂಕುಮ ಎಲ್ಲೆಡೆ ಚೆಲ್ಲಿತಿ ಬಳೆಗಳ ಸದ್ದು ಕೇಳಾಕತ್ತತಿ ಬಾಗಿನ ನೀಡಸ್ಕೊಳ್ಳಾಕ ಸೆರಗು ಮುಂದ ಚಾಚೇತಿ ಅಣ್ಣನ ಪ್ರೀತಿ ಜಾಸ್ತಿ ಆಗೆತಿ ಅಪ್ಪನ ಪ್ರೀತಿ ಕಣ್ಣ ತುಂಬಕೊಂಡತಿ ಅವ್ವನ ಪ್ರೀತಿ ಎದ್ಯಾಗ ಹಾಸಿ ಹೊಕ್ಕೆತಿ ಹೀಗೆ ಇರಲಿ ನನ್ನ ತವರ ಖುಷಿಯಿಂದ, ಸಂತೋಷದಿಂದ ಎಂದು ಉಡಿಲು ತುಂಬಕೊಂಡು ಪ್ರೀತಿಯಿಂದ ಹರಸ್ತೇನಿ ರಾಜೇಶ್ವರಿ ಲಕ್ಕಣ್ಣವರ

ಪ್ರಕೃತಿಯ ಅಳಲು

ನಾನು ಮಾರ್ಕೆಟ್‍ನಿಂದ ಮನೆಗೆ ಬರುತ್ತಿದ್ದೆ ಅದೊಂದು ನಿರ್ಜನ ಪ್ರದೇಶ. ಒಬ್ಬ ಹೆಂಗಸು ನನ್ನನ್ನು ಹಿಂಬಾಲಿಸುತ್ತಿದ್ದಳು ಅವಳು ನೋಡಲು ಒಂದು ಥರ ಹುಚ್ಚಿಯಂತೆ ಇದಳು, ಮೈಮೇಲೆ ಕೂದಲು ಹರಡಿಕೊಂಡಿತ್ತು. ಹಾಕಿಕೊಂಡಿದ್ದ ಬಟ್ಟೆಯಲ್ಲಾ ಹರಿದು ಹೋಗಿತ್ತು. ಮೈ ಒಳಗಿದ್ದ ರಕ್ತವೆಲ್ಲಾ ಸೋರಿ ಹೋದ ಹಾಗೆ ಒಣಕಲು ಕಡ್ಡಿಯಂತೆ ಇದ್ದಳು. ಅವಳು ಇದ್ದಕ್ಕಿದ್ದ ಹಾಗೆ ನನ್ನೆದುರಿಗೆ ಬಂದು ಅಳತೊಡಗಿದಳು ನನಗೆ ಭಯವಾಯಿತು ಸುತ್ತಲೂ ನೋಡಿದರೆ ಯಾರು ಇಲ್ಲ ನಾನೇ ಧೈರ್ಯ ಮಾಡಿ ಯಾರಮ್ಮಾ ನೀನು? ಏಕೆ ಹೀಗೆ ಅಳುತ್ತಿರುವೆ? ಎಂದೆ ಅದಕ್ಕೆ ಅವಳು ನಾನು ನಿಮ್ಮನ್ನೆಲ್ಲಾ ಹೋತ್ತುಕೊಂಡಿರುವವಳು. ಅದಕ್ಕೆ ನಾನು “ಅರ್ಥವಾಗಲಿಲ್ಲ “ಎಂದಾಗ” ನಾನು ಭೂಮಿತಾಯಿ ನಿಮ್ಮನ್ನೆಲ್ಲಾ ಹೊತ್ತುಕೊಂಡಿದ್ದೇನೆ ಎಂದಳು ಅದು ಸರಿ ನೀನು ಏಕೆ ಆಳುತ್ತಿದ್ದೀಯಾ” ಎಂದಾಗ, “ಏಕೆ ಎಂದರೆ ನನ್ನನ್ನೆಲ್ಲಾ ಮನುಷ್ಯರು ಕಿತ್ತು ತಿನ್ನುತ್ತಿದ್ದಾರಲ್ಲ ನಾನು ಏನು ಮಾಡಲಿ? ನಗರವನ್ನು ಡಿಜಿಟಲ್ ಮಾಡಬೇಕು ಎಂದು ನನ್ನ ಉಸಿರಾಗಿರುವ ಮರಗಳನ್ನು ಕಡಿದರು ಮರಗಳು ಇದ್ದ ಜಾಗದಲ್ಲಿ ಕಟ್ಟಡಗಳನ್ನು ಕಟ್ಟಿದರು ಮರಗಳಿದ್ದ ಕಾಡನ್ನು ಕಾಂಕ್ರೀಟ್ ನಾಡನ್ನಾಗಿ ಪರಿವರ್ತಿಸಿದರು. ಮರಗಳಲ್ಲಿ ಆಶ್ರಯ ಪಡೆದಿದ್ದ ನೂರಾರು ಪಕ್ಷಿಗಳು ಎಲ್ಲಗೆ ಹೋಗಬೇಕು? ಅವುಗಳನ್ನೆಲ್ಲಾನೀವು ಸಾಕುತ್ತೀರಾ? ನಿಮ್ಮ ನಿಮ್ಮ ಸ್ವಾರ್ಥಕ್ಕಾಗಿ ನನ್ನನ್ನು ಬಲಿ ಕೊಡುತ್ತಿದ್ದಿರಿ? ನನಗೆ ನ್ಯಾಯ ಕೊಡಿಸಿ ರಸ್ತೆಯ ಬದಿಯಲ್ಲಿದ ಮರಗಳನ್ನು

ಸ್ವಾದ-ರುಚಿಯ ಸಮ್ಮಿಲನದ ಧಾರವಾಡ ಪೇಡಾ

ಒಂದೊಂದು ಊರು ಒಂದೊಂದು ವಸ್ತುವಿನಿಂದ, ಸ್ಥಳದಿಂದ ಪ್ರಸಿದ್ದತೆಯನ್ನು ಹೊಂದಿರುತ್ತದೆ. ಚನ್ನಪಟ್ಟಣದ ಗೊಂಬೆಗಳು, ಗೋಕಾಕ್ ಕರದಂಟು, ಬೆಳಗಾವಿಯ ಕುಂದಾ, ಹುಬ್ಬಳ್ಳಿಯ ಮಿರ್ಚಿ-ಮಂಡಕ್ಕಿ, ಕೊಣ್ಣುರಿನ ಪೇರಳೆ, ಧಾರವಾಡದ ಪೇಡಾ ಹೀಗೆ ಒಂದೊಂದು ವಿಶೇಷತೆಯನ್ನು ಹೊಂದಿವೆ. ಧಾರವಾಡಕ್ಕೆ ಹೋಗಿ ಧಾರವಾಡ ಪೇಡತಿಂದ ಬಂದಿಲ್ಲ ಅಂದ್ರ ನಿಮ್ಮ ಜನ್ಮ ಅಪೂರ್ಣವಾದಂತೆ, ನೋಡ್ರೀ ಆಗ್ಲೇ ಧಾರವಾಡ ಪೇಡಾ ಅಂದ ಕೂಡ್ಲೆ ಬಾಯಲ್ಲಿ ಹೇಗೆ ನೀರೂರತಾ ಇದೆ ಅಂತ. ಈ ಪೇಡಾ ಇದೆ ಅಲ್ರೀ, ಇದು 19ನೇ ಶತಮಾನದಾಗ ಉತ್ತರ ಪ್ರದೇಶದಿಂದ ನಮ್ಮ ರಾಜ್ಯಕ್ಕೆ ವಲಸೆ ಬಂದ “ರಾಮ್ ರತನ್ ಸಿಂಗ್ ಠಾಕೂರ್” ರಿಂದ ಧಾರವಾಡಕ್ಕೆ ಬಂತು. ತಮ್ಮ ಮನೆಯಲ್ಲಿ ಅಷ್ಟೇ ತಯಾರಿಸಿ ತಿನ್ನುತ್ತಿದ್ದ ಇದನ್ನು ಠಾಕೂರ್ ಅವರ ಮೊಮ್ಮಗ “ಬಾಬುಸಿಂಗ್ ಠಾಕೂರ್ ಅವರು ಶಾಣೆತನ ಮಾಡಿ  ಇದನ್ನು ಮಾರಾಟ ಮಾಡತೊಡಗಿದರು. ಜನಾನೂ ಇದನ್ನು ಬಾಯಿ ಚಪ್ಪರಿಸಿಕೊಂಡ ತಿನ್ನಾಕ್ ಶುರು ಮಾಡಿದರು. ಇವರ ಮೊದಲ ಅಂಗಡಿ ಶುರುವಾದದ್ದು ಲೈನ್ ಬಜಾರ್‍ನಲ್ಲಿ. ಅದಕ್ಕೆ ಲೈನ್ ಬಜಾರ್‍ಗೆ ಪೇಡಾ ಲೈನ್ ಬಜಾರ್ ಎಂದು ಕರೀತಾರ, ಲೈನ್ ಬಜಾರಗೆ ಹೋದ್ರೇ ಮಾತ್ರ ನಿಮಗೆ ನಿಜವಾದ ರುಚಿ ಇರೋ ಠಾಕೂರ್ ಪೇಡಾ ಸಿಗೊದು.  ಠಾಕೂರ್ ಪೇಡಾ ಎಂದು ಹೇಳಿ ಮಾರುತ್ತಿದ್ದ ಇದು ಇಂದು ಧಾರವಾಡದ ಪರಿಸರಕ್ಕೆ ಒಗ್ಗಿ “ಧಾರವಾಡ ಪೇಡಾ” ಎಂದು ಕರೆಸಿಕೊಳ್ಳುವಷ್ಟರÀ  ಮಟ್ಟಿಗೆ ಪ್ರಸಿದ್ದ ಪಡೆದತಿ. ಈ ಪೇಡಾವನ್ನು ಮಾಡುವ ಕರಾಮತ್ತು ಈ ಕುಟುಂಬಕ್ಕೆ ಮಾತ್ರಗ

ರೈಲಿನಲ್ಲಿ...

ಮೂಲೆಯಲ್ಲಿ ಮಲಗಿದವನೊಬ್ಬನ ಪಾದಗಳು ಹೊದ್ದುಕೊಂಡಿದ್ದ ಚಾದರದಾಚೆಗೂ ಹೊರಗೆ ಇಣುಕಿ ಹಾಕುತ್ತಿವೆ.. ಚಾಯ್-ಕಾಫಿಯವನ ಕೂಗು ಮಲಗಿದವರನ್ನೆಲ್ಲ ಬಡಿ-ಬಡಿದು ಎಬ್ಬಿಸುತ್ತಿದೆ.. ರಾತ್ರಿಯೆಲ್ಲ ಸೀಟು ಸಿಗದೆ ಒಂದು ಸೀಟಿನ ಮೂಲೆಯಲ್ಲಿ ಕುಳಿತವನೊಬ್ಬ ನೇಸರನೂ ಮೂಡಿದಂತೆಲ್ಲ ನಿದಿರೆಗೆ ಶರಣಾಗುತ್ತಿದ್ದಾನೆ.. ಇಡ್ಲಿ-ವಡೆಯ ಘಮ ಹೊಟ್ಟೆಯ ಹಸಿವನ್ನು ಕೆರಳಿಸುವಂತಿದೆ ಫ್ಯಾನು ತಿರುಗುತಿಲ್ಲವೆಂದು ಒಬ್ಬನೂ ಸಣ್ಣಗೆ ಗೊಣಗುತ್ತಿದ್ದಾನೆ.. ಇದ್ಯಾವುದರ ಗೊಡವೆಯೆ ಬೇಡವೆಂದು ಅಪ್ಪರ್ ಬರ್ತಿನಲ್ಲಿ ಮಲಗಿದವರು ಮಗ್ಗಲು ಹೊರಳಿಸುತ್ತಿದ್ದಾರೆ.. ಒಂದೇ ಬಾರಿಗೆ ಕನ್ನಡದ ಜೊತೆಗೆ ತೆಲುಗು, ತಮಿಳು ಭಾಷೆಗಳು ಅಲ್ಲಲ್ಲಿ ಮಾತನಾಡಿಕೊಳ್ಳುತ್ತಿವೆ.. ಇಂತಹ ಹತ್ತೆಂಟು ಕಂಫಾರ್ಟ್ಮೆಂಟಗಳನ್ನು ಜೋಡಿಸಿಕೊಂಡು ರೈಲು ಕಂಬಿಗಳ ಜೊತೆಯಲ್ಲಿ ಚಕ್ರದೊಂದಿಗೆ ಸೆಣಸಾಡುತ್ತಿದೆ.. ಇದೆಲ್ಲವನ್ನೂ ನೋಡುತ್ತಾ ಕುಳಿತ ನಾನು ಕಿಟಕಿಯಾಚೆ ನೋಟ ನೆಟ್ಟಿದ್ದೆ... ರಾಜೇಶ್ವರಿ ಲಕ್ಕಣ್ಣವರ