ಪೋಸ್ಟ್‌ಗಳು

ಸೆಪ್ಟೆಂಬರ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ರಾದೇಶಿಕತೆಯ ಅನಾವರಣದ 'ರೊಟ್ಟಿ ಮುಟಗಿ'

ಇಮೇಜ್
ನಮ್ಮ ನಡುವಿನ ತರುಣ ಕಥೆಗಾರ ಟಿ.ಎಸ್.ಗೊರವರ ಅವರು ಬರೆದಿರುವ ಮೊದಲ ಕಾದಂಬರಿ ರೊಟ್ಟಿ ಮುಟಗಿ. ಅಪ್ಪಟ ಪ್ರಾದೇಶಿಕತೆಯನ್ನು, ಒಂದು ಹಳ್ಳಿಯ ಚಿತ್ರಣವನ್ನು ಓದುಗರಿಗೆ ಕಟ್ಟಿಕೊಡುವಲ್ಲಿ ಈ ಕಾದಂಬರಿ ಯಶಸ್ವಿಯಾಗಿದೆ ಎಂದು ಹೇಳಬಹುದು. ಬಾಲ್ಯದಲ್ಲಿ ತನ್ನ ತಂದೆಯನ್ನು ಕಳೆದುಕೊಂಡ ದ್ಯಾಮ, ತನ್ನ ತಾಯಿಯ ಆಸರೆಯಲ್ಲಿ ಬೆಳೆಯುತ್ತಾನೆ. ಇದ್ದಕ್ಕಿದ್ದ ಹಾಗೆ ತಾಯಿಯೂ ತೀರಿಕೊಂಡಾಗ ಅನಾಥನಾಗುವ ದ್ಯಾಮ, ಅವರಿವರ ಆಸರೆಯಲ್ಲಿ ಬೆಳೆದು ತನ್ನ ಬದುಕನ್ನು ಕಟ್ಟಿಕೊಳ್ಳುವ ಕಥನವೇ ರೊಟ್ಟಿ ಮುಟಗಿ. ರೊಟ್ಟಿ ಮುಟಗಿ ಈ ಕಥನದ ಒಂದು ಪಾತ್ರವಾಗಿದೆ. ತನ್ನ ಹೆಂಡತಿ ಲಕ್ಷ್ಮವ್ವ ರೊಟ್ಟಿಮುಟಗಿ ಮಾಡಿಕೊಟ್ಟಾಗಲೆಲ್ಲ ದ್ಯಾಮನಿಗೆ ತನ್ನವ್ವನ ನೆನಪಾಗುತ್ತದೆ. ಇದು ಕೇವಲ ದ್ಯಾಮನ ಬದುಕಿನ ಕಥನವಾಗದ ಒಂದು ಹಳ್ಳಿಯ, ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಕಾದಂಬರಿಯಲ್ಲಿ ಬರುವ ರೊಟ್ಟಿಮುಟಗಿ, ತತ್ತಿಸಾರು, ದನ ಕಾಯುವ ಪ್ರಸಂಗ, ಎಲ್ಲವೂ ಇಲ್ಲಿ ವಿಶೇಷವಾಗಿವೆ. ಗೊರವರ ಅವರ ಒಂದು ವಿಶೇಷತೆ ಏನೆಂದರೆ ಅವರು ಬಳಸುವ ರೂಪಕಗಳು. ದಿನಗಳು ಚಳಿಗಾಲದಲ್ಲಿ ಮರದ ಎಲೆಗಳು ಒಂದೊಂದಾಗಿ ಕಳಚಿ ಬೀಳುವಂತೆ ಒಂದರ ಹಿಂದೆ ಒಂದು ಸಾಲುಗಟ್ಟಿದ ದಿನಗಳು ಕಾಲನೊಳಗೆ ಒಂದಾಗಿ ಹೋದವು. (ಪುಟ-೧೩) ಹೆಸರೇ ಗೊತ್ತಿಲ್ಲದ ಕಾಡು ಹೂಗಳ ಸಂಗ ಮಾಡಿದ್ದವು ಜೇನು ಹುಳುಗಳು. (ಪುಟ-೧೯) ಕಿಟಕಿಯಿಂದ ಸಣ್ಣಗೆ ಸೆರಗು ಬೀಸತೊಡಗಿದ್ದ ಗಾಳಿಗೆ ಅವಳ ಮುಂಗುರುಳು ವಿಜಯದ ಪತಾಕೆಯಂತೆ ಹಾರಾಡತೊಡಗಿದ್ದವು.(ಪುಟ

ಸಂಬಂಧಗಳು ಸವೆಯುತ್ತಿವೆ

ಸಂಬಂಧಗಳು ಸವಕಲಾಗುತ್ತಿವೆ, ಹೌದು ನೀವು ನಂಬಲೇಬೇಕು ನಾಲ್ಕು ಮೂಲೆಯ ಕಂಪ್ಯೂಟರಿನ ಮಧ್ಯೆದಲಿ ಕಳೆದು ಹೋಗುತ್ತಿದ್ದೇವೆ ನಾವು ಇಲ್ಲಿ ಯಾವುದಕ್ಕೂ ಸಮಯವಿಲ್ಲ ನೆಮ್ಮದಿಯಾಗಿ ಕೂತು ಮಾತನಾಡಲು ಸಹ ನಂಬಲೇಬೇಕು ಸಂಬಂಧ ಹಳಸಿ ಹೋಗುತ್ತಿದೆ ಎಂದರೆ ಐದಾರು ಇಂಚಿನ ಸ್ಮಾರ್ಟ್ ಫೋನಿನ ಪರದೆಯಲ್ಲಿ ಬಾಂಧವ್ಯದ ಬೆಸುಗೆ ಕಡಿತವಾಗುತ್ತಿದೆ ವಾಟ್ಸಾಪು ಚಾಟಿನಲ್ಲಿ ಗಂಟೆಗಟ್ಟಲೆ ಹರಟುವ, ಎದುರಾದಾಗ ಮಾತು ಗಂಟಲಲ್ಲೆ ಉಳಿದು, ಮಾತನಾಡಲಾಗದೆ ಮುಖ ತಿರುವುತ್ತಿದ್ದೇವೆ. ದೂರದಲ್ಲೆಲ್ಲೂ ಸ್ಕೈಪು, ವಿಡಿಯೋ ಕಾಲಗಳಲ್ಲಿ ಅಳಿದುಳಿದ ಮಾತುಕತೆ ನೀವು ನಂಬಲೇಬೇಕು ಸಂಬಂಧಗಳು ಸವೆಯುತ್ತಿವೆ

ಇನ್ಯಾವತ್ತು ಮತ್ತೆ ನಾನು ಕತ್ತಲಲ್ಲಿ ಹೊರಗಡೆ ಕಾಲಿಡಲಿಲ್ಲ

“ಇನ್ನೂ ಸ್ವಲ್ಪ ಮಳ್ಯಾಗ ನೆನಿ ನೆಗಡಿ ಬರದ ಇರ್ತತತೀನ” “ಏನಾತೀಗ ಅವ್ವ, ನೆಗಡಿ ಬಂದ್ರೆ” ಏನಾತ ಅಂದ್ರೆ ಅದ್ರಾಗ ನಿನಗ ನೆಗಡಿ ಬಂದ್ರ ಲಗೂನ ಹೋಗುದಿಲ್ಲ ಅದು, ನಿನಗ ಬರುದಿರಲಿ ಮನೀ ಮಂದಿನ ಎಲ್ಲಾ ಅಡ್ಡಾಡಿಸ್ತಿನೀ ನೀ” ಎಂದು ನನ್ನವ್ವ ಮಳೆಯಲ್ಲಿ ನೆನೆದು ನೆಗಡಿ ಬರಿಸಿಕೊಂಡಿದ್ದ ನನಗೆ ಒಂದೇ ಸಮನೆ ಹೊರಗೆ ಸುರಿಯುವ ಮಳೆಯಂತೆ ಮನೆಯಲ್ಲಿ ಬೈಗುಳದ ಧಾರೆಯನ್ನೇ ಸುರಿಸುತ್ತಿದ್ದಳು. ಅಬ್ಬಾ...! ನನ್ನ ಕರ್ಣ ಕಠೋರಗಳು ಅದನ್ನು ಕೇಳಿ-ಕೇಳಿ ಸುಸ್ತಾದವು. ಹೇಗಾದರೂ ಮಾಡಿ ಈ ಬೈಗುಳವನ್ನು ತಡೀಬೇಕೆಂದು “ಅಂಗಡಿಗೆ ಹೋಗಿ ಗುಳಿಗೆ ತಂದ ತಗೊಂತೆನಂತ” ನೀ ಸುಮ್ಮನಾಗು ಎಂದು ಹೇಳಿ ಸುಮ್ಮನ ಕೊರಿಸಿದೆ. ರಾತ್ರಿ ಸುಮಾರು 9.30 ಹೊರಗಡೆ ಇಂಥ ಬೇಶಿಗೆಯಲ್ಲೂ ಧಾರಾಕಾರವಾಗಿ ಸುರಿದು ತನ್ನ ಇರುವಿಕೆಯನ್ನು ತೋರಿಸುತ್ತೀರುವ ಮಳೆ ಅಮವಾಸ್ಯೆ ಹತ್ತಿರ ಬಂದಿದೆ ಎಂದು ಮೋಡದಲ್ಲಿ ಮರೆಯಾಗಿರುವ ಚಂದಿರ ಕರೆಂಟ್ ಬೇರೆ ಇಲ್ಲ. ಹೇಗೆ ಗುಳಿಗೆ ತರಲಿ? ಎಂದು ಚಿಂತಿಸತೊಡಗಿದೆ. ಸಂಜೆ ಆಯ್ತಂದರೆ ಸಾಕು ಮನೆಯಿಂದ ಹೊರಗೆ ಕಾಲಿಡದ ಧೈರ್ಯವಂತೆ ನಾನು ಏನಾದರೂ ಆಗಲಿ ಅವ್ವನ ಬೈಗುಳದಿಂದ ಮುಕ್ತಿ ಪಡೆಯುವುದಕ್ಕೊಸ್ಕರನಾದರೂ ಅಂಗಡಿಗೆ ಹೋಗಲೆಬೇಕೆಂದು ತೀರ್ಮಾನಿಸಿದೆ. ಅಪ್ಪಾಜಿ “ನಾನು ತರ್ತೀನಿ ಅಂದ್ರು ಬೇಡ ನೀವು ಈಗ ತಾನೇ ಊರಿಂದ ಬಂದಿದೀರಿ. ನಾನೇ ಹೋಗ್ತಿನಿ ಅಂತ ಹೊರಟೆ, ಇದ್ದಬಿದ್ದ ಅಲ್ಪ ಧೈರ್ಯವನ್ನೆಲ್ಲಾ ಒಟ್ಟೂಗೂಡಿಸಿಕೊಂಡು ಮನೆಯಿಂದ ಹೆಜ್ಜೆ ಇಟ್ಟೆ ಜೋರಾಗಿ ಘಳನೆ