ಒಂಟಿಯೊಲೆಯ ಗತ್ತು-ಗಮ್ಮತ್ತು

ಕಿವಿಗಳನ್ನು ಮತ್ತಷ್ಟು ಸಿಂಗರಿಸಲು, ಧರಿಸುವ ಬಟ್ಟೆಗಳಿಗೆ ತಕ್ಕಂತೆ ಅದಕ್ಕೆ ಮ್ಯಾಚ್ ಆಗುವ ರೀತಿಯಲ್ಲಿ ಕಿವಿಯೊಲೆಗಳನ್ನು  ಧರಿಸುವುದು ಸಹಜ. ಆದರೆ ಒಂದೇ ಕಡೆ ಮಾತ್ರ ಓಲೆಯನ್ನು ಧರಿಸಿ ಮಿಂಚುವುದು ಈಗಿನ ಹುಡುಗಿಯರ ಫ್ಯಾಷನ್. ಇದಕ್ಕೆ ಮೆರಗು ನೀಡುವಂತೆ ಒಂಟಿಯೊಲೆಗಳು ಸದ್ಯದ ಟ್ರೆಂಡ್ ಆಗಿವೆ.

ಹೆಸರೇ ಹೇಳುವಂತೆ, ಇವು ಒಂದೇ ಕಡೆಯ ಕಿವಿಯಲ್ಲಿ ಮಾತ್ರ ಧರಿಸುವಂತೆ ಒಂದೇ ಕಿವಿಯೊಲೆ ಇರುತ್ತದೆ. ಇವು ಹಲವಾರು ವಿನ್ಯಾಸಗಳಲ್ಲಿ ಹಲವಾರು ರೀತಿಯಲ್ಲಿ ಇವು ಲಭ್ಯವಾಗುತ್ತವೆ.

ಇವು ಉದ್ದನೆಯ ರಿಂಗ್, ಎಳೆಯಾಕಾರದ, ಸಣ್ಣ ಬೀಡ್ಸ್, ಸುರುಳಿಯಾಕಾರದಲ್ಲಿ, ಹಾಗೂ ಕಿವಿಯ ಹಿಂದೆ ಧರಿಸುವಂತೆ ಕಾಣುವ ಹಲವಾರು ಬಗೆ-ಬಗೆಯ ವಿನ್ಯಾಸಗಳಲ್ಲಿ ಇವು ಲಭ್ಯವಾಗುತ್ತವೆ.

ಇಂತಹ ಕಿವಿಯೊಲೆಗಳು ಎಲ್ಲ ತರಹದ ಡ್ರೆಸ್ ಗಳ ಮೇಲೆಯೂ ಚಂದವಾಗಿ ಕಾಣುತ್ತವೆ, ಅದರಲ್ಲಿಯೂ ಗ್ರ್ಯಾಂಡ್ ಆದ ಚೂಡಿದಾರ್, ಘಾಗ್ರಾ, ಮಸ್ತಾನಿ ಡ್ರೆಸ್ ಗಳ ಮೇಲೆ ಧರಿಸಿದಾಗ ಇವು ನಿಮ್ಮನ್ನು ಮತ್ತಷ್ಟು ಅಂದಗಾಣಿಸುವುದರಲ್ಲಿ ಸಂಶಯವೇ ಇಲ್ಲ.

ಕೇವಲ ಚೂಡಿ, ಘಾಗ್ರಾಗಳಿಗೆ ಮಾತ್ರವಲ್ಲದೆ, ಆಫೀಶಿಯಲ್, ಕ್ಯಾಜೂಯಲ್ ಹಾಗೂ ಜೀನ್ಸ್ ಮೇಲೆಯೂ ಇವನ್ನು ಧರಿಸಬಹುದಾಗಿದೆ. ಸದ್ಯಕ್ಕೆ ಇವು ಲಲನಾಮಣಿಯರ ಹಾರ್ಟ್ ಫೆವರಿಟ್.

ಇವುಗಳನ್ನು ಧರಿಸಿದಾಗ ಇವು ನಿಮ್ಮ ಕರಣಗಳಿಗೆ ಮತ್ತಷ್ಟು ಮೆರಗು ತಂದು ಕೊಡುತ್ತವೆ. ಎರಡು ಕಡೆ ಕಿವಿಯೊಲೆ ಧರಿಸಿ ಬೇಜಾರಾಗಿದ್ರೆ ಈ ಒಂಟಿಯೊಲೆಯನ್ನು(Single earring) ಅನ್ನು ಧರಿಸಿ ಸ್ನೇಹಿತರ ನಡುವೆ ಇನ್ನಷ್ಟೂ ಸುಂದರವಾಗಿ ಕಾಣಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ