ಸಂಗೀತಾಸಕ್ತರ ಮನಸೆಳೆದ “ಮುಂಜಾವು”

                                                ಸಂಗೀತಾಸಕ್ತರ  ಮನಸೆಳೆದ “ಮುಂಜಾವು”


ಇಂದಿನ ದಿನಮಾನದಲ್ಲಿ ಯುವಜನತೆಯು ಕಿರುಚಿತ್ರಗಳನ್ನು ನಿರ್ಮಿಸುವತ್ತ, ಸಂಗೀತದ(ಮ್ಯೂಸಿಕಲ್) ಆಲ್ಬಂಗಳನ್ನು ಹೊರ ತರುವಂತಹ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಿರುಚಿತ್ರಗಳನ್ನು ಮ್ಯೂಸಿಕಲ್ ವಿಡಿಯೋಗಳನ್ನು ಕ್ಯಾಮರಾದಲ್ಲಿ ಅಥವಾ ಮೊಬೈಲ್ ಕ್ಯಾಮರದಲ್ಲಿಯೇ ಚಿತ್ರಿಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾ ತಮ್ಮ ಪ್ರತಿಭೆಯನ್ನು ತೋರುತ್ತಿದ್ದಾರೆ.

ಇತ್ತೀಚಿಗೆ ಕನ್ನಡದಲ್ಲಿ ಸಂಗೀತದಲ್ಲಿ ಒಳ್ಳೆಯ ಬದಲಾವಣೆ ಕಾಣುತ್ತಿದ್ದರೂ ಅದಕ್ಕೆ ಪೂರಕವಾದ ವಾತಾವರಣ ದೊರೆಯುತ್ತಿಲ್ಲ. ಬೇರೆ ಭಾಷೆಗಳಲ್ಲಿ ಒಖಿಗಿ uಟಿಠಿಟuggeಜ, ಛಿoಞe sಣuಜio, ಏಚಿಠಿಠಿಚಿ ಖಿvಯ  ಒusiಛಿ ಒoರಿo ನಂತಹ ಮುಂತಾದ ಆನ್‍ಲೈನ್ ವೇದಿಕೆಗಳು ಲಭ್ಯವಿವೆ. ಆದರೆ ಇಂತಹ ವೇದಿಕೆಗಳು ಕನ್ನಡದ ಮಟ್ಟಿಗೆ ಬಹಳ ಕಡಿಮೆ ಎಂದೇ ಹೇಳಬಹುದು. ಅಲ್ಲೊಂದು ಇಲ್ಲೊಂದು ಎನ್ನುವಂತೆ ಕೆಲವೊಂದಿಷ್ಟು ಯುಟ್ಯೂಬ್‍ನಂತಹ ಆನ್‍ಲೈನ್ ವೇದಿಕೆಗಳು ಬೆರಳೆಣಿಯೆಷ್ಟು ಮಾತ್ರ ಇವೆ. ಆದರೆ ಕೆಲವರು ಸ್ವಆಸಕ್ತಿಯಿಂದ, ಸಮಾಜಕ್ಕಾಗಿ ಹಾಗೂ ಮರೆತು ಹೋದಂತಹ ಹಳೆಯ ಹಾಡುಗಳನ್ನು ಮರುಸೃಷ್ಟಿಸುವುದಕ್ಕಾಗಿ ಜನರಲ್ಲಿ ಇನ್ನೂ ಹೆಚ್ಚಿನ ಸಂಗೀತದ ಅಭಿರುಚಿಯನ್ನು ಬೆಳೆಸುವುದಕ್ಕಾಗಿ ಕೆಲವೊಂದು ಮ್ಯೂಸಿಕ್ ಆಲ್ಬಂಗಳನ್ನು ಹೊರ ತರುತ್ತಾರೆ.

ಅದೇ ರೀತಿ ಜನರ ಮನಸ್ಸು ಮುಟ್ಟುವಂತಹ, ಕೇಳುಗರಿಗೆ ಹಿತವಾಗುವಂತಹ ಸಂಗೀತವನ್ನು ನೀಡಬೇಕು ಎಂಬ ಮಹಾದಾಸೆಯಿಂದ ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಎಸ್ಸಿ ತೃತೀಯ ವರ್ಷದ ವಿದ್ಯಾರ್ಥಿ ನವೀನ್ ತೇಜಸ್ವಿ ತಮ್ಮ ಚೊಚ್ಚಲ ಪ್ರಯತ್ನದಲ್ಲಿಯೇ ‘ಮುಂಜಾವು’ ಎಂಬ ಹಾಡನ್ನು ಹೊರ ತರುವ ಮೂಲಕ ಸಂಗೀತ ರಸಿಕರ ಮನಸ್ಸು ಗೆಲ್ಲುವಲ್ಲಿ ಸಫಲರಾಗಿದ್ದಾರೆ.

ಕ್ರೌಡ್ ಸೋರ್ಸಿಂಗ್
ಇಂತಹ ಮ್ಯೂಸಿಕ್ ಆಲ್ಬಂಗಳನ್ನು ಹೊರ ತರಬೇಕೆಂದರೆ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಆದರೆ ಇವರಿನ್ನೂ ವಿದ್ಯಾರ್ಥಿಗಳು, ಹೇಗಾದರೂ ಪ್ರಯತ್ನ ಪಟ್ಟು ಹೊರ ತರಬೇಕು ಎಂಬ ಅಭಿಲಾಷೆ ಹೊಂದಿರುವ ಇವರು ಅದಕ್ಕಾಗಿ ಕಂಡುಕೊಂಡ ಮಾರ್ಗವೇ “ಕ್ರೌಡ್ ಸೋರ್ಸಿಂಗ್”. ಕ್ರೌಡ್ ಫಂಡಿಂಗ್ ಅಂದರೆ ಹಣವನ್ನು ಸಂಗ್ರಹಿಸುವುದು ಎಂದು, ಕ್ರೌಡ್ ಸೋರ್ಸಿಂಗ್ ಎಂದರೆ ತಮಗೆ ಬೇಕಾದ ವಸ್ತುಗಳನ್ನು ಸಂಗ್ರಹಿಸುವುದು ಎಂದಾಗುತ್ತದೆ. ಇದರ ಮೂಲಕ ತಮ್ಮ ಕಾಲೇಜಿನಲ್ಲಿ ತಮ್ಮ ಕನಸನ್ನು ವ್ಯಕ್ತಪಡಿಸಿದಾಗ ಅದಕ್ಕೆ ಸ್ಪಂದಿಸಿದ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸ್ನೇಹಿತರಿಂದ ತಮಗೆ ಅಗತ್ಯವಿದ್ದ ವಸ್ತುಗಳನ್ನು ಸಂಗ್ರಹಿಸಿದರು. ಹೀಗೆ ಕ್ಯಾಮರಾ, ಸಂಗೀತದ ಪರಿಕರಗಳನ್ನು ಸ್ನೇಹಿತರು  ನೀಡಿ ಇವರ ಕನಸಿನ ಸಸಿಗೆ ನೀರೆರೆದರು.



ಮುಂಜಾವು ತಂಡದ ಕವರ್ ಫೋಟೋ

ಇವರ ಪ್ರಥಮ ಪ್ರಯತ್ನವಾದ ‘ಆರೋಹಣ: ಮುಂಜಾವು’ ಮ್ಯೂಸಿಕಲ್ ಸಾಂಗ್, ಇದೀಗ ಸಾಮಾಜಿಕ ಜಾಲತಾಣವಾದ ಯೂಟ್ಯೂಬ್‍ನಲ್ಲಿ ಪ್ರಸಿದ್ಧಿಯನ್ನು ಹೊಂದಿದ್ದು, ಎಲ್ಲ ಸಂಗೀತ ಪ್ರೇಮಿಗಳ ಮನವನ್ನು ಗೆದ್ದಿದೆ. ಕೇವಲ ಅಪ್‍ಲೋಡ್ ಮಾಡಿದ 24 ಗಂಟೆಯೊಳಗೆ ಇದರ ನೋಡುಗರ ಸಂಖ್ಯೆ 5000 ರ ಗಡಿ ದಾಟಿದೆ. ಕೇವಲ ಎರಡೇ ದಿನದಲ್ಲಿ 7000ಕ್ಕಿಂತ ಹೆಚ್ಚಿನ ಜನರು ಇದನ್ನು ವೀಕ್ಷಣೆ ಮಾಡಿದ್ದಾರೆ.

ಮೊದಲಿನಿಂದಲೂ ಸಂಗೀತ, ಕಲೆ ಮೊದಲಾದ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದ ನವೀನ್ ಇಂತಹ ಸಂಗೀತದ ಆಲ್ಬಂ ಒಂದನ್ನು ತರುವ ಯೋಚನೆ ತಲೆಗೆ ಬಂದಾಗ, ಅದನ್ನು ಕೇವಲ ತಲೆಯಲ್ಲಿಯೇ ಅವತಿಸಿಕೊಳ್ಳದೇ, ಕಾರ್ಯರೂಪಕ್ಕೂ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಅವರ ಸ್ನೇಹಿತರು ಸಾಥ್ ನೀಡಿ, ಸಹಕರಿಸಿದ್ದಾರೆ.

ಸಬ್‍ಟೈಟಲ್ಸ್ ಸ್ಟುಡಿಯೋ
ನವೀನ್ ಹಾಗೂ ಅವರ ಸ್ನೇಹಿತರೆಲ್ಲರೂ ಸೇರಿ ಐದು ತಿಂಗಳ ಹಿಂದೆ ‘ಸಬ್‍ಟೈಟಲ್ಸ್ ಸ್ಟುಡಿಯೋ’ ಎಂಬ ಯೂಟ್ಯೂಬ್ ಅಕೌಂಟ್ ಒಂದನ್ನು ಪ್ರಾರಂಭಿಸಿದರು. ಇದೀಗ ಈ ಅಕೌಂಟ್ ಮುಖಾಂತರ ತಮ್ಮ ಆಲ್ಬಂ ಸಾಂಗ್‍ನ್ನು ಅಪ್‍ಲೋಡ್ ಮಾಡಿದ್ದಾರೆ.

ಕಡಿಮೆ ವೆಚ್ಚದಲ್ಲಿ ರೆಕಾರ್ಡಿಂಗ್
ವಿದ್ಯಾರ್ಥಿಗಳಾದ ಇವರು ತಮ್ಮ ಪಾಕೆಟ್ ಮನಿಯನ್ನು ಉಳಿಸಿ, ಬೆಂಗಳೂರಿನಲ್ಲಿ ಕಡಿಮೆ ವೆಚ್ಚದಲ್ಲಿ ರೆಕಾರ್ಡಿಂಗ್ ಮಾಡುವ ‘ಮಲ್ಲೇಶ್ವರಂ ಅನನ್ಯಾ ಸ್ಟುಡೀಯೋ’ ಅನ್ನು ಪತ್ತೆ ಹಚ್ಚಿ ಹಾಡಿನ ರೆಕಾರ್ಡಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ.

ಒಳಾಂಗಣ ಚಿತ್ರೀಕರಣ

ಹೊರಾಂಗಣ ಚಿತ್ರೀಕರಣ ಮಾಡುವುದಕ್ಕಿಂತ ಒಳಾಂಗಣ ಚಿತ್ರೀಕರಣ ಮಾಡುವುದು ಒಳ್ಳೆಯದು ಎಂದು ಭಾವಿಸಿದ ನವೀನ್‍ಗೆ ತನ್ನಾಸೆಯಂತೆ ತಮ್ಮ ಕಾಲೇಜಿನ ಎಂಸಿಜೆ ವಿಭಾಗದ ಸ್ಟುಡೀಯೋದಲ್ಲೆ ಚಿತ್ರೀಕರಣ ಮಾಡಲು ಅವಕಾಶ ದೊರಕಿತು. ತಮ್ಮ ಕಲ್ಪನೆಯಂತೆ ಅದನ್ನು ಕಾರ್ಯರೂಪಕ್ಕೂ ಇಳಿಸುವಲ್ಲಿ ನವೀನ್ ಹಾಗೂ ಅವರ ತಂಡವು ಯಶಸ್ವಿಯಾಯಿತು.

ವಿದ್ಯಾರ್ಥಿಗಳ ಮೇಲುಗೈ
ಈ ಹಾಡಿಗಾಗಿ ಕೆಲಸ ಮಾಡಿದ ಎಂಟು ಜನರಲ್ಲಿ ಆರು ಜನ ವಿದ್ಯಾರ್ಥಿಗಳು ಎನ್ನುವುದು ವಿಶೇಷ. ಛಾಯಾಗ್ರಾಹಕ ಹಾಗೂ ಕೊಳಲು ವಾದಕ ಇವರು ಉದ್ಯೋಗವನ್ನು ಮಾಡುತ್ತಿದ್ದು, ಈ ಆರೂ ಜನ ಒಂದೇ ಕಾಲೇಜಿನಲ್ಲಿ ಬೇರೆ ಬೇರೆ ವಿಷಯಗಳನ್ನು ಅಭ್ಯಸಿಸುತ್ತಿದ್ದಾರೆ. ಇವರ ಸಮಾನ ಅಭಿರುಚಿ, ಸಮಾನಾಸಕ್ತಿ ಇವರನ್ನು ಒಟ್ಟಾಗಿ ಸೇರಿಸಿದೆ.

ಸಾಹಿತ್ಯದ ಆಸಕ್ತಿ ಇರುವ ನವೀನ್ ಹಾಡಿಗಾಗಿ ತಮ್ಮ ಮುದ್ದಾದ ಪದಗಳನ್ನು ಪೋಣಿಸಿದ್ದು, ಅದು ಕೇಳುಗರಿಗೆ ಇಂಪಾಗಿದೆ. ಇವರೇ ಸಾಹಿತ್ಯವನ್ನು ರಚಿಸಿರುವುದು ಮಾತ್ರವಲ್ಲದೆ, ಸಂಗೀತದ ಒಂದು ಪರಿಕರವಾದ ಯುಕೇಲೇಲಿ ಎಂಬ ವಿಶಿಷ್ಟ ಸಾಧನವನ್ನು ನುಡಿಸಿ ಈ ಹಾಡಿನ ನಿರ್ದೇಶನವನ್ನು ಮಾಡಿದ್ದಾರೆ.

ಈ ಹಾಡಿಗೆ ಅರ್ಚನಾ. ಎಸ್ , ಅಕ್ಷಯ್ ಅನಿಲಕುಮಾರ ದನಿಯಾಗಿದ್ದು, ಸುಜಿತ್ ಉಡುಪ ಇದಕ್ಕೆ ಸಂಗೀತ ನಿರ್ದೇಶನ ಮಾಡಿ ಗಿಟಾರ್ ಹಿಡಿದಿದ್ದಾರೆ. ಎಲೆಕ್ಟ್ರಿಕ್ ಗಿಟಾರ್ ವಾದಕರಾಗಿ ಹರಿಕುಮಾರ್ ಶಾಸ್ತ್ರೀ. ಬಿ, ಯುಕೇಲೇಲಿ ವಾದಕರಾಗಿ ನವೀನ್ ಸಾಥ್ ನೀಡಿದ್ದು, ಎಲೆಕ್ಟ್ರಿಕ್ ಗಿಟಾರ್ ವಾದಕರಾಗಿ ಹರಿಕುಮಾರ್ ಶಾಸ್ತ್ರೀ. ಬಿ, ಯುಕಲೇಲಿ ವಾದಕರಾಗಿ ನವೀನ್ ಸಾಥ್ ನೀಡಿದ್ದು, ಇದನ್ನು ಅಚ್ಚುಕಟ್ಟಾಗಿ ಚಿತ್ರಿಸುವಲ್ಲಿ ಜೊಸೇಫ್ ಆ್ಯಂಟೋನಿ, ವಿವೇಕ್ ಎಸ್. ಕೆ ಶ್ರಮಿಸಿದ್ದಾರೆ. ಸಂಕಲನಕಾರರಾಗಿ ವಿವೇಕ್ ಎಸ್.ಕೆ ಕಾರ್ಯನಿರ್ವಹಿಸಿದ್ದಾರೆ.

ಫೇಸ್‍ಬುಕ್ ಪ್ರಚಾರ
ಹಾಡನ್ನು ರೆಕಾರ್ಡಿಂಗ್ ಮಾಡಿ, ಅದನ್ನು ಚಿತ್ರಿಸಿದ ಈ ತಂಡದವರಿಗೆ ಅದನ್ನು ಪ್ರಚಾರ ಮಾಡುವಲ್ಲಿ ಇವರು ಬಳಸಿಕೊಂಡ ವೇದಿಕೆ ಫೇಸ್‍ಬುಕ್. ಎಲ್ಲರೂ ಫೇಸ್‍ಬುಕ್ ಅನ್ನು ತೆಗಳಿದರೆ ಇವರು ಅದರ ಮೂಲಕವೇ ಪ್ರಚಾರ ಮಾಡುವ  ಮೂಲಕ ತಮ್ಮ ಹಾಡನ್ನು ಎಲ್ಲರಿಗೂ ಬೇಗ ತಲುಪವಂತೆ ನೋಡಿಕೊಂಡಿದ್ದಾರೆ. ಫೇಸ್‍ಬುಕ್‍ನಲ್ಲಿ ಇರುವ ಹಲವಾರು ಟ್ರೋಲ್ ಪೇಜ್‍ಗಳನ್ನು ಸಂಪರ್ಕಿಸಿ ಅವರ ಮೂಲಕ ಮ್ಯೂಸಿಕ್ ವಿಡೀಯೋ ಲಿಂಕ್‍ನ್ನು ಶೇರ್ ಮಾಡಿ ಎಲ್ಲರಿಗೂ ತಲುಪುವಂತೆ ನೋಡಿಕೊಂಡಿದ್ದಾರೆ.

ಆರೋಹಣ ಮುಂಜಾವು
ಇದಕ್ಕೆ ಆರೋಹಣ ಮುಂಜಾವು ಎಂಬ ಹೆಸರನ್ನಿಟ್ಟಿದ್ದು, ಆರೋಹಣವೆಂದರೆ ಕೆಳಗಿನಿಂದ  ಮೇಲೆ ಹೋಗುವುದು ಎಂಬರ್ಥ ಬರುತ್ತದೆ. ಅದೇ ರೀತಿಯಾಗಿ ದೊಡ್ಡ ದೊಡ್ಡ ಸಂಗೀತದ ಆಲ್ಬಂಗಳನ್ನು ನಿರ್ಮಿಸಬೇಕೆಂದು ಸಣ್ಣದರಿಂದ ದೊಡ್ಡದರತ್ತ ಸಾಗಬೇಕು ಎಂಬರ್ಥದಲ್ಲಿ ‘ಆರೋಹಣ’ ಎಂಬ ಹೆಸರನ್ನಿಟ್ಟಿದ್ದಾರೆ.

ತಮ್ಮ ಸ್ಟುಡಿಯೋದ ಮೂಲಕ ಮರೆತು ಹೋಗುತ್ತಿರುವ ಗೀತೆಗಳನ್ನು ಹೊಸ ರೀತಿಯಲ್ಲಿ  ರೀಕಂಪೊಸ್ ಮಾಡಿ ಜನರಿಗೆ ಇಷ್ಟವಾಗುವ ರೀತಿಯಲ್ಲಿ ಪ್ರೆಸೆಂಟ್ ಮಾಡುವುದು, ಜೊತೆಗೆ ಸ್ವತಂತ್ರ ಹಾಗೂ ಹವ್ಯಾಸಿ ಕಲಾವಿದರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ. ಕನ್ನಡದಲ್ಲಿ ಮತ್ತಷ್ಟು ಹೊಸ  ಹಾಡುಗಳನ್ನು ಹೊಸೆದು, ಕೇಳುಗರಿಗೆ ಇಂಪಾಗುವಂತೆ ಮಾಡುವುದು, ಹೊಸ ಕಲಾವಿದರಿಗೆ ಅವಕಾಶವನ್ನು ನೀಡುವುದು, ಮುಂದಿನ ದಿನಗಳಲ್ಲಿ ಇನ್ನೂ ಇಂತಹ ಒಳ್ಳೆಯ ಕಂಟೆಂಟ್‍ಗಳನ್ನು ಕೊಡುವುದು ನವೀನ್ ತೇಜಸ್ವಿಯವರ ಆಶಯವಾಗಿದೆ.


ತೆರೆ ಹಿಂದಿನ ಮಾಂತ್ರಿಕರು
ನವೀನ್-ನಿರ್ದೇಶನ, ಸಾಹಿತ್ಯ, ಪರಿಕಲ್ಪನೆ
ಸುಜಿತ್-ಸಂಗೀತ ನಿರ್ದೇಶನ ಹಾಗೂ ಗಿಟಾರ್ ವಾದಕ
ವಿವೇಕ ಎಸ್.ಕೆ- ಛಾಯಾಗ್ರಾಹಕ ಹಾಗೂ ಸಂಕಲನಕಾರ



ಈ ಮ್ಯೂಸಿಕಲ್ ಆಲ್ಬಂ ಅನ್ನು ಯೂಟ್ಯೂಬ್‍ನ hಣಣಠಿ://ಥಿouಣu.be/6ಜಿಥಿರಿಗಿZ_xZಟಛಿ  ಲಿಂಕ್‍ನಲ್ಲಿ ನೋಡಬಹುದು. ಸಂಗೀತದಲ್ಲಿ ಆಸಕ್ತಿಯಿರುವರು ಟಿಚಿveeಟಿhosಚಿbಚಿಟe@gmಚಿiಟ.ಛಿom ಗೆ  ಹಾಗೂ subಣiಣಟessಣuಜios@gmಚಿiಟ.ಛಿom  ಗೆ ಸಂಪರ್ಕಿಸಬಹುದಾಗಿದೆ.




ನವೀನ್- ನಿರ್ದೇಶನ, ಸಾಹಿತ್ಯ, ಪರಿಕಲ್ಪನೆ









ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ