ಕಿರುಗತೆಗಳು

ಅವನು ಸದಾ ವಟಗುಡುವಂತಹ ಮಾತುಗಾರ, ಅವಳು ತುಟಿಯಲುಗಿಸದ ಮೌನಿ, ಅವರಿಬ್ಬರಿಗೂ ಸ್ನೇಹವಾಯಿತು ಅವಳು ಮಾತು ಕಲಿತಳು, ಅವನು ಮೌನಿಯಾದನು.
*******
ಅವನು ಅಕ್ಷರ ಮೋಹಿ, ಅವಳು ಪುಸ್ತಕ ವ್ಯಾಮೋಹಿ ಅವರಿಗೆ ಪರಿಚಯವಾಯಿತು, ಸ್ನೇಹವಾಯಿತು, ಹಾಗೆಯೆ ಪ್ರೀತಿಯು ಆಯಿತು, ಒಟ್ಟಾದರು ಅವರ ಬದುಕಿಗ ಒಂದು ಕಾದಂಬರಿ.
*******
ಅವನು ತುಟಿಯಂಚಿನಲ್ಲಿಯೆ ನಗುವ ಕನಸುಗಾರ, ಅವಳು ಅಪ್ಪಟ ವಾಸ್ತವವಾದಿ.ಎಷ್ಟೋ ಮಾತು- ಕತೆಗಳು ನಡೆದರು ಅವಳು ಅವನನ್ನು ಒಪ್ಪಲೆ ಇಲ್ಲ.
*******
ಅವನು ಅವಳು ಪರಸ್ಪರ ಜಗಳವಾಡುತ್ತಿದ್ದರು, ನಮ್ಮಿಬ್ಬರ ನಡುವೆಯಿರುವುದು ಪ್ರೀತಿಯಂದು ಅವನು, ಅಲ್ಲ ಅದು ಸ್ನೇಹ ಎಂದಳವಳು, ಕಡೆಗೆ ಜಗಳ ಮುಕ್ತಾಯವಾಗಲೆ ಇಲ್ಲ.
*******
ಅವಳೆಂದಳು ನೀ ಯಾಕೆ ನನ್ನ ಪ್ರೀತಿಸಿದೆ, ಯಾಕೆಂದೂ ಗೊತ್ತಿಲ್ಲ ಕಾರಣಗಳೇ ಇಲ್ಲ ಪ್ರೀತಿ ಹುಟ್ಟಲು ಎಂದು ತಣ್ಣಗೆ ಉತ್ತರಿಸಿದನು.
*****
ಅವನು - ಕಾಮನಬಿಲ್ಲಿನಲ್ಲಿ ರಂಗು ಕಡಿಮೆಯಾಗಿದೆ.
ಅವಳು - ಎಲ್ಲಿ ಎಲ್ಲ ಇದ್ದ ಹಾಗೆ ಇವೆಯಲ್ಲ
ಅವನು - ಇಲ್ಲ ಅದು ನಿನ್ನ ಕಂಗಳಲ್ಲಿ ಅಡಗಿ ಕೂತಿದೆ.
*******
ಅವನಿಗೆ ಬಹಳ ಬೇಜಾರಾದಗಲೆಲ್ಲ ಅವಳು ಅವನನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡು ಮುಂಗುರಳಲ್ಲಿ ಬೆರಳಾಡಿಸುವವಳು. ಅವಳಿಗೆ ಗೊತ್ತಿರಲಿಲ್ಲ ಅವಳ ಮಡಿಲಲ್ಲಿ ಮಲಗಬೇಕೆಂದು ಅವನು ಸುಳ್ಳು ಹೇಳುತ್ತಿದ್ದದ್ದು.
*******
ಅವನು ಅವಳು ಇಬ್ಬರೂ ಅವಸರದಲ್ಲಿದ್ದರು, ಒಬ್ಬರಿಗೊಬ್ಬರು ಡಿಕ್ಕಿ ಹೊಡೆದರು, ಅವನು ಮಾತಾಡಲಿಲ್ಲ ಅವಳು ತುಟಿ ಬಿಚ್ಚಲಿಲ್ಲ, ಸಂಜೆ ಮತ್ತೆ ಸಿಕ್ಕರು ಜೊತೆಯಾದರು ಮಾತನಾಡುತ್ತ ಕುಳಿತರು ಅವರದೇ ಭಾಷೆಯಲ್ಲಿ ಅವರಿಗೆ ಮಾತು ಮೌನಭಾಷೆಯಾಗಿತ್ತು.
*******
ಅವನು- ಏನೋ ಅರಿಕೆ ಮಾಡಿಕೊಳ್ಳಬೇಕಿತ್ತು
ಅವಳು - ಹಾ ಖಂಡಿತ
ಅವನು - ನಾನು ನೋಡಿದಾಗಲೆಲ್ಲ ನಿನ್ನ ನಗು ತುಂಬಾ ಸುಂದರವಾಗಿರುತ್ತದೆ ಕಾರಣ ಏನು
ಅವಳು - ತಿಳಿದುಕೊಳ್ಳಬೇಕಾ
ಅವನು -ಹ್ಹು
ಅವಳು - ಈ ನಗು ನೀ ನ‌‌ನ್ನ ಜೊತೆ ಇರುವಾಗ ಮಾತ್ರ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ