ಮರೆತು ಹೋದ ಹುಡುಗನಿಗೆ,

ಮರೆತು ಹೋದ ಹುಡುಗನಿಗೆ,

ಹೇಗಿದ್ದಿಯೋ ಹುಡಗಾ, ಹೇಗಿದ್ದಿಯಾ ಎಂದೂ ಕೇಳುವುದಕ್ಕೆ ನನಗೆ ಅರ್ಹತೆ ಇಲ್ಲ ನನ್ನ ನಂಬಿಸಿ ಮೋಸ ಮಾಡಿದವಳು ನೀನು ಎಂದು ಅಂದಕೊಂಡಿರಬೇಕು ನೀನು, ಆದರೆ ನಿ‌ನ್ನ ಮರೆಯೋಕೆ ಆಗದೆ ಮನಸ್ಸಲ್ಲೆ ಇಟ್ಟುಕೊಂಡು ಎಷ್ಟು ಒದ್ದಾಡುತ್ತಿರುವೆ ಎಂದು ನಿನಗೇನೊ ಗೊತ್ತು??

ಎಲ್ಲೋ ಬೆಂಗಳೂರು ಅಲ್ಲಿ ಕೆಲಸ ಮಾಡ್ತುದೀಯಾ ಎಂದು ಗೊತ್ತಾಯ್ತು, ಮದ್ವೆ ದಿನ ಬಂದಿದ್ದೆ ನನ್ನ ಕಂಗಳು ನಿನ್ನೆ ಹುಡ್ಕಿದ್ದವು ಆದರೆ ನೀ ನನ್ನ ಕಡೆ ನೋಡ್ಲೆ ಇಲ್ಲ.

ನಿನ್ನ ತೋಟದ ಕಡೆಯಿಂದ ಭೇಟಿ ಮಾಡಿ ಬರೋವಾಗ ನಮ್ಮಪ್ಪ ನಿನ್ನ ಜೊತೆ ಇದ್ದಿದ್ದನ್ನ ನೋಡಿಬಿಟ್ಟರು, ಮನೆಯಲ್ಲಿ ರಂಪ-ರಾದ್ಧಂತ ಅತ್ತು ಕರೆದೆ ಏನು ಮಾಡಿದರು ಯಾರು ಕರಗಲಿಲ್ಲ, ಅಡ್ಡವಾಗಿದ್ದು ಬೇರೆ ಏನು ಅಲ್ಲ ಈ ಜಾತಿ, ಈ ಜಾತಿ ಅನ್ನೋದು ಇಲ್ಲದೆ ಹೊಗಿದ್ರೆ ನನ್ನ ನಿನ್ನ ಬೇರೆ ಮಾಡೋಕೆ ಯಾರಿಂದನೂ ಸಾಧ್ಯ ಆಗ್ತಿರಲಿಲ್ಲ. ಮನೇಲಿ ನೀ ಅವನನ್ನ ಮರೆತು ಈ ಮದ್ವೆಗೆ ಒಪ್ಪಿದ್ರೆ ಸರಿ ಇಲ್ಲದೆ ಇದ್ದರೆ ನನ್ನ, ನಿಮ್ಮ ಅವ್ವನ ಇಲ್ಲೇ ಮರ್ತ ಬಿಡು ಎಂದು ಅಪ್ಪಯ್ಯ ಅಂದಾಗ, ಯಾವ ಬಾಯಿಯಿಂದ ಇಲ್ಲ ಅನ್ಲೀ ಹೇಳು,

ಅಪ್ಪಯ್ಯ ಏನೋ ಸಿಕ್ಕಿದ್ದ ಒಂದ ಗಂಡ ಜೊತಿ ನನ್ನ ಮದ್ವಿ ಮಾಡಿ ಕಳಿಸಿ ಬಿಟ್ರು, ನನ್ನ ಒಪ್ಪಿಗೆ ಕೇಳಲಿಲ್ಲ, ನನ್ನ ಇಷ್ಟ ಇದೆಯೋ ಇಲ್ವೊ ಅನ್ನಲಿಲ್ಲ, ಅವರಿಗೆ ಹೆತ್ತ ಮಗಳಿಗಿಂತ ಮನೆತನದ ಮರ್ಯಾದೆ ಉಳಿಸಿಕೊಳ್ಳೊದೆ ಮುಖ್ಯ ಆಗಿತ್ತು.

ಪ್ರೀತಿಸಿದವನ ಮರೆಯೊಕೆ ಆಗದೆ ಹೇಗೊ ತಾಳಿ ಕಟ್ಟಿದವನ ಋಣಕ್ಕೆ ಆ ಮನೆಗೆ ಹೋದೆ. ಬಲವಂತದ ನಗು, ಬಲವಂತದ ಮಾತು, ಬಲವಂತದ ಸಂಬಂಧ ನನ್ನ ಮಾತನ್ನು ಕೇಳುವವರಾರು? ನಾನು ಹೇಳುವುದಾದರೂ ಯಾರಿಗೆ ಹೇಳಲಿ?  ಹೇಗೋ ಮಗುವಾಯಿತು ಅಷ್ಟೇ ಅದಕ್ಕೂ ನಿನ್ನ ಹೆಸರನ್ನೇ ಇಟ್ಟಿದ್ದಿನಿ, ಆವಾಗಲಾದರೂ ನಿನ್ನ ಹೆಸರನ್ನು ಸದಾ ನೆನಪಿಸಿಕೊಳ್ಳಬಹುದಲ್ಲ ಎಂದು, ಈ ನಿನ್ನ ಹುಡ್ಗಿದು ತಪ್ಪೇನೂ ಇಲ್ಲ ಕಣೋ ಹುಡುಗಾ ದಯವಿಟ್ಟು ನನ್ನ ಕ್ಷಮಿಸ್ತಿಯಾ ಅಲ್ಲ, ಬೇರೆ ಒಳ್ಳೆಯ ಹುಡುಗಿಯನ್ನು ಹುಡುಕಿ ಮದ್ವೆಯಾಗೋ ಸದಾ ನಿನಗೆ ಒಳಿತಾಗಲಿ ಎಂದು ನಿನ್ನನ್ನೆ ಧ್ಯಾನಿಸುತ್ತಿರುವ...

ಇಂತಿ,
ನೀನು ಮರೆತು ಹೋದ ಹುಡುಗಿ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ