ಥ್ರಿಲ್ಲರ್ ಕಥೆಗಳು

ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹೆಂಡತಿಯು ಅನಾರೋಗ್ಯದಿಂದ ತೀರಿಕೊಂಡಾಗ ಅವಳ ಚಿತೆಗೆ ಬೆಂಕಿ ಕೊಟ್ಟು, ಸಮುದ್ರ ತೀರದಲ್ಲಿ ಒಂಟಿಯಾಗಿ ಕೂತವನು ಎದ್ದು ಹೊರಟ. ಅವನ ಹೆಜ್ಜೆಯ ಪಕ್ಕದಲ್ಲಿ ಮತ್ತೆರಡು ಹೆಜ್ಜೆಗಳು ಮೂಡಿ ಮರೆಯಾಗುತ್ತಿದ್ದವು.

******************

ಅಪಾರ್ಟ್ಮೆಂಟಿನ ಮನೆಯೊಂದರಲ್ಲಿ ಒಬ್ಬ ತಾಯಿ ಹಾಗೂ ಸಣ್ಣ ಮಗು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಮುಚ್ಚಿಟ್ಟು ಬ್ರೋಕರ್ ಆ ಗಂಡ- ಹೆಂಡತಿಯರಿಗೆ ಆ ಮನೆಯನ್ನು ಕೊಂಡುಕೊಳ್ಳುವಂತೆ ಮಾಡಿದ್ದ. ಈಗ ಆ ದಂಪತಿಗಳಿಗೆ ದಿನಾ ರಾತ್ರಿ ಮಗು ಅಳುತ್ತಿರುವಂತೆ, ತಾಯಿ ಅದನ್ನು ಸಂತೈಸುವಂತಹ ಶಬ್ದ ಕೇಳಿಸುತ್ತದೆ.

******************

ಕಾವ್ಯ ಹಾಗೂ ರಮ್ಯ ಜೀವದ ಗೆಳತಿಯರು. ಕಾವ್ಯ ಅವಘಡಕ್ಕೆ ತುತ್ತಾಗಿ ಸಣ್ಣ ವಯಸ್ಸಿನಲ್ಲಿಯೇ ಅಕಾಲ ಮರಣ ಹೊಂದಿದಳು. ಅದಾದ ಸ್ವಲ್ಪ ದಿನದಲ್ಲಿಯೇ ರಮ್ಯ, ಕಾವ್ಯಳಂತೆ ನಡೆದುಕೊಳ್ಳತೊಡಗಿದಳು. ಡಾಕ್ಟರ್ ರಮ್ಯಳನ್ನು ಪರೀಕ್ಷಿಸಿದರು. 'ಕಾವ್ಯಳ ಅಗಲಿಕೆಯೇ ರಮ್ಯಾಳ ಈ ವರ್ತನೆಗೆ ಕಾರಣ' ಎಂದು ಡಾಕ್ಟರ್ ಹೆತ್ತವರ ಹತ್ತಿರ ಹೇಳುತ್ತಿದ್ದರೆ, ರಮ್ಯಾ 'ನನ್ನ ಗೆಳತಿಯನ್ನು ಬಿಟ್ಟಿರಲಾಗಲಿಲ್ಲ. ಅದಕ್ಕೆ ಅವಳ ಹತ್ತಿರ ಬಂದಿದ್ದೀನಜ' ಎಂದು ಬಡಬಡಿಸುತ್ತಿದ್ದಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ