ರೈಲಿನಲ್ಲಿ...

ಮೂಲೆಯಲ್ಲಿ ಮಲಗಿದವನೊಬ್ಬನ
ಪಾದಗಳು ಹೊದ್ದುಕೊಂಡಿದ್ದ
ಚಾದರದಾಚೆಗೂ ಹೊರಗೆ
ಇಣುಕಿ ಹಾಕುತ್ತಿವೆ..
ಚಾಯ್-ಕಾಫಿಯವನ ಕೂಗು
ಮಲಗಿದವರನ್ನೆಲ್ಲ
ಬಡಿ-ಬಡಿದು ಎಬ್ಬಿಸುತ್ತಿದೆ..
ರಾತ್ರಿಯೆಲ್ಲ ಸೀಟು ಸಿಗದೆ
ಒಂದು ಸೀಟಿನ ಮೂಲೆಯಲ್ಲಿ
ಕುಳಿತವನೊಬ್ಬ ನೇಸರನೂ
ಮೂಡಿದಂತೆಲ್ಲ ನಿದಿರೆಗೆ ಶರಣಾಗುತ್ತಿದ್ದಾನೆ..
ಇಡ್ಲಿ-ವಡೆಯ ಘಮ
ಹೊಟ್ಟೆಯ ಹಸಿವನ್ನು ಕೆರಳಿಸುವಂತಿದೆ
ಫ್ಯಾನು ತಿರುಗುತಿಲ್ಲವೆಂದು ಒಬ್ಬನೂ
ಸಣ್ಣಗೆ ಗೊಣಗುತ್ತಿದ್ದಾನೆ..
ಇದ್ಯಾವುದರ ಗೊಡವೆಯೆ ಬೇಡವೆಂದು
ಅಪ್ಪರ್ ಬರ್ತಿನಲ್ಲಿ ಮಲಗಿದವರು
ಮಗ್ಗಲು ಹೊರಳಿಸುತ್ತಿದ್ದಾರೆ..
ಒಂದೇ ಬಾರಿಗೆ ಕನ್ನಡದ ಜೊತೆಗೆ ತೆಲುಗು,
ತಮಿಳು ಭಾಷೆಗಳು ಅಲ್ಲಲ್ಲಿ
ಮಾತನಾಡಿಕೊಳ್ಳುತ್ತಿವೆ..
ಇಂತಹ ಹತ್ತೆಂಟು
ಕಂಫಾರ್ಟ್ಮೆಂಟಗಳನ್ನು ಜೋಡಿಸಿಕೊಂಡು
ರೈಲು ಕಂಬಿಗಳ ಜೊತೆಯಲ್ಲಿ
ಚಕ್ರದೊಂದಿಗೆ ಸೆಣಸಾಡುತ್ತಿದೆ..
ಇದೆಲ್ಲವನ್ನೂ ನೋಡುತ್ತಾ ಕುಳಿತ
ನಾನು ಕಿಟಕಿಯಾಚೆ ನೋಟ ನೆಟ್ಟಿದ್ದೆ...

ರಾಜೇಶ್ವರಿ ಲಕ್ಕಣ್ಣವರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ