ಪ್ರಕೃತಿಯ ಅಳಲು


ನಾನು ಮಾರ್ಕೆಟ್‍ನಿಂದ ಮನೆಗೆ ಬರುತ್ತಿದ್ದೆ ಅದೊಂದು ನಿರ್ಜನ ಪ್ರದೇಶ. ಒಬ್ಬ ಹೆಂಗಸು ನನ್ನನ್ನು ಹಿಂಬಾಲಿಸುತ್ತಿದ್ದಳು ಅವಳು ನೋಡಲು ಒಂದು ಥರ ಹುಚ್ಚಿಯಂತೆ ಇದಳು, ಮೈಮೇಲೆ ಕೂದಲು ಹರಡಿಕೊಂಡಿತ್ತು. ಹಾಕಿಕೊಂಡಿದ್ದ ಬಟ್ಟೆಯಲ್ಲಾ ಹರಿದು ಹೋಗಿತ್ತು. ಮೈ ಒಳಗಿದ್ದ ರಕ್ತವೆಲ್ಲಾ ಸೋರಿ ಹೋದ ಹಾಗೆ ಒಣಕಲು ಕಡ್ಡಿಯಂತೆ ಇದ್ದಳು. ಅವಳು ಇದ್ದಕ್ಕಿದ್ದ ಹಾಗೆ ನನ್ನೆದುರಿಗೆ ಬಂದು ಅಳತೊಡಗಿದಳು ನನಗೆ ಭಯವಾಯಿತು ಸುತ್ತಲೂ ನೋಡಿದರೆ ಯಾರು ಇಲ್ಲ ನಾನೇ ಧೈರ್ಯ ಮಾಡಿ ಯಾರಮ್ಮಾ ನೀನು? ಏಕೆ ಹೀಗೆ ಅಳುತ್ತಿರುವೆ? ಎಂದೆ ಅದಕ್ಕೆ ಅವಳು ನಾನು ನಿಮ್ಮನ್ನೆಲ್ಲಾ ಹೋತ್ತುಕೊಂಡಿರುವವಳು. ಅದಕ್ಕೆ ನಾನು “ಅರ್ಥವಾಗಲಿಲ್ಲ “ಎಂದಾಗ” ನಾನು ಭೂಮಿತಾಯಿ ನಿಮ್ಮನ್ನೆಲ್ಲಾ ಹೊತ್ತುಕೊಂಡಿದ್ದೇನೆ ಎಂದಳು ಅದು ಸರಿ ನೀನು ಏಕೆ ಆಳುತ್ತಿದ್ದೀಯಾ” ಎಂದಾಗ, “ಏಕೆ ಎಂದರೆ ನನ್ನನ್ನೆಲ್ಲಾ ಮನುಷ್ಯರು ಕಿತ್ತು ತಿನ್ನುತ್ತಿದ್ದಾರಲ್ಲ ನಾನು ಏನು ಮಾಡಲಿ? ನಗರವನ್ನು ಡಿಜಿಟಲ್ ಮಾಡಬೇಕು ಎಂದು ನನ್ನ ಉಸಿರಾಗಿರುವ ಮರಗಳನ್ನು ಕಡಿದರು ಮರಗಳು ಇದ್ದ ಜಾಗದಲ್ಲಿ ಕಟ್ಟಡಗಳನ್ನು ಕಟ್ಟಿದರು ಮರಗಳಿದ್ದ ಕಾಡನ್ನು ಕಾಂಕ್ರೀಟ್ ನಾಡನ್ನಾಗಿ ಪರಿವರ್ತಿಸಿದರು. ಮರಗಳಲ್ಲಿ ಆಶ್ರಯ ಪಡೆದಿದ್ದ ನೂರಾರು ಪಕ್ಷಿಗಳು ಎಲ್ಲಗೆ ಹೋಗಬೇಕು? ಅವುಗಳನ್ನೆಲ್ಲಾನೀವು ಸಾಕುತ್ತೀರಾ? ನಿಮ್ಮ ನಿಮ್ಮ ಸ್ವಾರ್ಥಕ್ಕಾಗಿ ನನ್ನನ್ನು ಬಲಿ ಕೊಡುತ್ತಿದ್ದಿರಿ? ನನಗೆ ನ್ಯಾಯ ಕೊಡಿಸಿ ರಸ್ತೆಯ ಬದಿಯಲ್ಲಿದ ಮರಗಳನ್ನು ಕಡಿದು ರಸ್ತೆಯನ್ನು ಅಗಲಿಕರಣಗೊಳಿಸಿ ಮತ್ತಷ್ಟು ವಾಹನಗಳು ಹೆಚ್ಚಿಗೆ ಹೋಗುವ ಹಾಗೆ ಮಾಡಿ ವಾಹನಗಳ ವಿಷಾನಿಲವನ್ನು ಕುಡಿಸಿದಿರಿ ಮತ್ತೇ ಗಿಡಗಳನ್ನು ನೆಟ್ಟಿರುವಿರಾ? ಹೀಗೆ ಮರಗಿಡ ಇಲ್ಲದೆ ಮಳೆ ಆಗು ಆಗು ಅಂದ್ರೇ ಅದು ಎಲ್ಲಿಂದ ಆಗಬೇಕು? ಹೇಳಿ” ಎಂದಳು.

ಭೂಮಿತಾಯಿ ಇಷ್ಟೆಲ್ಲಾ ಹೇಳಿದಾಗ ಹೌದಲ್ಲಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ತನ್ನ ಬದುಕಿಗಾಗಿ ಪ್ರಕೃತಿಯನ್ನು ಬಲಿ ಹಾಕುತ್ತಿದ್ದಾನೆ ನಮಗೆ ಕೇಳದೆ ಸಕಲವನ್ನು ಕೊಟ್ಟ ಪ್ರಕೃತಿಗೆ ನಾವೇನು ನೀಡುತ್ತಿದ್ದೇವೆ ಎಂದೆನಿಸಿತು ನಾನು ಅವಳಿಗೆ ಸಮಾಧಾನವನ್ನು ಮಾಡುತ್ತಾ ಹೇಳು ನಾವೇನು ಮಾಡಬೇಕು? ಎಂದೆ.

ಅದಕ್ಕೆ ಅವಳು ಎಲ್ಲರೂ ಗಿಡವನ್ನು ನೆಡಿ, ಅದಕ್ಕೆ ಸರಿಯಾಗಿ ನೀರುಣಿಸಿ ಬೆಳೆಸಿ, ನಿಮ್ಮ ಸುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ, ನಿಮ್ಮ ಮನೆಯವರನ್ನು ಪ್ರೀತಿಸಿದಂತೆ ಪ್ರಕೃತಿಯನ್ನು ಪ್ರೀತಿಸಿ, ನೀರನ್ನು ಸರಿಯಾಗಿ ಬೇಕಾದಷ್ಟೇ ಬಳಸಿ, ಆಗ ನಾನೂ ಸುಖವಾಗಿರುತ್ತೇನೆ. ನೀವು ಸಂತೋಷದಿಂದ ಸುಖವಾಗಿರುತ್ತೀರಾ ಎಂದು ಹೇಳಿ ಮಾಯವಾದಳು.

ನನಗೆ ಫಕ್ಕನೆ ಎಚ್ಚರವಾಯಿತು, ಎದ್ದು ನೋಡಿದಾಗ ಇನ್ನೂ ರಾತ್ರಿ, ಇದು ಕನಸು ಎಂದು ಗೊತ್ತಾಯಿತು. ಆ ಕನಸನ್ನೆ ನೆನಪಿಸಿಕೊಂಡು ಯೋಚನೆ ಮಾಡಿದೆ. ಹೌದಲ್ಲ ಮನುಷ್ಯ ತನಗೆ ಎಲ್ಲವನ್ನು ಕೊಟೆ ಈ ಪ್ರಕೃತಿಗೆ ಏನನ್ನು ನೀಡಿದ್ದಾನೆ? ಮನುಷ್ಯನ ಕೊಡುಗೆ ಏನೆನು ಇಲ್ಲ,

ಹೌದಲ್ಲ ಸ್ನೇಹಿತರೆ ಭೂಮಿತಾಯಿ ಹೇಳಿದ ಮಾತುಗಳು ಎಷ್ಟು ನಿಜ ಎಲ್ವಾ? ಇನ್ನು ಮೇಲೆ ನಿರ್ಧರಿಸೋಣ ಎಲ್ಲರೂ, ಪ್ರಕೃತಿಯನ್ನು ಉಳಿಸೊಣ ಪ್ರಕೃತಿಯನ್ನು ಉಳಿಸೋಣ.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ