ಬಸ್ಸಿನಲ್ಲೊಂದು ಕಥನ

ಕಿಟಕಿಯ ಬದಿಯಲ್ಲಿ ಕೂತ
ಕನಸು ಕಂಗಳ ಪೋರನೊಬ್ಬ
ಹೊಸದೆನನ್ನೊ ನೋಡುವಂತೆ
ಆಚೆ ಬಯಲನ್ನು ಎವೆಯಿಕ್ಕದೆ
ನೋಡುತ್ತಿದ್ದಾನೆ..
ಬೊಕ್ಕ ತಲೆಯ, ಬೊಚ್ಚು ಬಾಯಿಯ ಹಿರಿದೆಲೆಯ ಅಜ್ಜನೊಬ್ಬ
ಚಿಗುರಲೆಯ ತನ್ನ ಮೊಮ್ಮಗನೊಂದಿಗೆ
ಹರಟಲು ಪ್ರಯತ್ನಿಸುತ್ತಿದ್ದೆ
ಮೊಮ್ಮಗನ ಕಣ್ಣುಗಳು
ಐದು ಇಂಚಿನ ಟಚ್ ಸ್ಕ್ರೀನ್
ಪರದೆಯ ಮೇಲೆ ನೆಟ್ಟಿವೆ..
ಅವನ ಹಿಂಬದಿ ಸೀಟಿನವನೊಬ್ಬ
ಆಗಾಗ ಎಲೆ-ಅಡಿಕೆ ಜಗಿಯುತ್ತಾ
ಒಂದೊಂದು ಊರಿನ ಸ್ಟಾಪು
ಬಂದಾಗಲೆಲ್ಲ
ಕಿಟಕಿಯ ಹೊರಗೆ ಇಣುಕಿ
ನೆಲದ ಮೇಲೆ ಕೆಂಪು
ಪಿಚಕಾರಿ ಮೂಡಿಸುತ್ತಿದ್ದಾನೆ..
ಕಂಡಕ್ಟರ್ ಈ ಕುರಿಯ
ಮಂದೆಯಂತಹ ಬಸ್ಸಿನಲ್ಲಿ
ಟಿಕೇಟ್ ಕೊಡಲು ಹರಸಾಹಸ
ಮಾಡುತ್ತಿದ್ದಾನೆ..
ಯಾವ ಯಾವ ಊರಿನವರು
ಪಕ್ಕ ಪಕ್ಕದಲ್ಲಿ ಕುಳಿತು ಅವರವರ
ಕ್ಷೇಮ--ಸಮಾಚಾರ ವಿಚಾರಿಸುತ್ತಿದ್ದಾರೆ..
ಇದು ದಿನನಿತ್ಯ ಮುಗಿಯದ
ಕಥೆ ಎಂದು ಡ್ರೈವರ್ ಬಸ್ಸಿನ
ಶಿಳ್ಳೆಯನ್ನು ಜೋರಾಗಿ
ಅಮಕುತ್ತಾನೆ..

ರಾಜೇಶ್ವರಿ ಲಕ್ಕಣ್ಣವರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ