ಹಂಪಿ


ಒಂದಾನೊಂದು ಕಾಲದಲ್ಲಿ
ಸೇರಲ್ಲಿ ಮುತ್ತು-ರತ್ನಗಳನ್ನು
ಮಾರುತ್ತಿದ್ದರಂತೆ,
ಇತಿಹಾಸವನ್ನು ಕಂಡವರಾರು
ನಾವು ನೋಡಿದ್ದೆವೆ
ಇತಿಹಾಸವನ್ನು
ತಲೆ ತಲೆಗಳಿಂದ ಹರಿದು
ಬಂದ ಮಾತಿನಲ್ಲಿ..
ಅವರಿವರು ಬರೆದ ಹೊತ್ತಿಗೆಯಲ್ಲಿ
ಈಗ,
ಆಗಿನ ಗತವೈಭವವಾಗಿ ಮೆರೆದಿದ್ದಕ್ಕೆ
ಸಾಕ್ಷಿಯಾಗಿ
ಉಳಿದಿವೆ ಅಳಿದುಳಿದ ಕಲ್ಲುಬಂಡೆಗಳು
ಆಗಿನ ಇತಿಹಾಸವೇ
ಈಗಿನ ಹಣದ ಮೂಲ
ಈಗಿನ ಖಾಲಿ ರೋಡುಗಳು
ಕಲ್ಲುಬಂಡೆಗಳು
ಮೌನವಾಗಿಯೆ ತಮ್ಮ
ಕಥೆಯನ್ನು ಹೇಳುತ್ತಿವೆ
ಶಿಲ್ಪಗಳ ಅಳಿದುಳಿದ
ಕಲೆಗಳು ತಮ್ಮ ಮೇಲೆ
ನಡೆದ ದೌರ್ಜನ್ಯಕ್ಕೆ
ಸಾಕ್ಷಿಯೆಂಬಂತೆ
ನಿಂತಿವೆ
ಈಗಿನ ಕೊಂಪೆಗೂ
ಆಗಿನ ಹಂಪೆಗೂ
ಎಷ್ಟೊಂದು ವಾಸ್ತವ, ವ್ಯತ್ಯಾಸ

ರಾಜೇಶ್ವರಿ ಲಕ್ಕಣ್ಣವರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ