ಗೌರಿ ಹಬ್ಬ


ಕಾಯುತಿಹಳು ತಂಗಿ ಹೊಸ್ತಿಲ
ತುದಿಯಲ್ಲಿ ನಿಂತು
ಹಬ್ಬ ಬಂತು ಅಣ್ಣ ಯಾಕ
ಕರೆಯಾಕ ಬಂದಿಲ್ಲ ಎಂದು

ಹಬ್ಬ ಬಂದೈತಿ
ಬಾಗಿನ ಉಡಿ ತುಂಬಕೊಂಡು
ನನ್ನನ್ನು ಬೆಳೆಸಿದ ತವರಿಗೆ
ಹರಸುವುದು ಐತಿ
ಉಡೂಗೊರೆ ತೆಗೆದುಕೊಳ್ಳೊದು ಐತಿ
ಇನ್ನೂ ಯಾಕ ಬರತಿಲ್ಲ ಅಣ್ಣ

ಎಲ್ಲರಿಗೂ ಸಿಹಿ ಹಂಚೋದು ಐತಿ
ನಾ ಹಚ್ಚಿದ ಮೊಲ್ಲೆಯ ಗಿಡ
ಎಷ್ಟ‌ ಬೆಳೆದತಿನ..?
ಹಿತ್ತಲಲ್ಲಿ ಕಟ್ಟಿದ ಜೇನುಗೂಡು
ಜೇನು ಬಿಟ್ಟಿದೆಯೆನು..?
ಅವ್ವ ನಿನಗಿಷ್ಟವಾದ ಕೆಂಪು ಜರತಾರಿ ಸೀರೆನೆ
ತಂದೆನಿ ಎಂದಾಳ
ಎಲ್ಲಿರುವನೋ ಅಣ್ಣ

ಬಂದ ನಮ್ಮ ಅಣ್ಣ ಅದೋ
ಮೂಲೆಯಲ್ಲಿ ಕಾಣಾಕತ್ತಾನಾ
ನಾ ಹೊಂಟೆ ಹಬ್ಬಕ್ಕೆ ನಮ್ಮ
ಅಣ್ಣನ ಜೊತೆ ತವರಿಗೆ
ದಾರಿಯಲ್ಲೆಲ್ಲಾ ಮಲ್ಲಿಗೆಯ ಕಂಪು ಹರಡೆತಿ
ಅರಿಶಿಣ-ಕುಂಕುಮ ಎಲ್ಲೆಡೆ ಚೆಲ್ಲಿತಿ
ಬಳೆಗಳ ಸದ್ದು ಕೇಳಾಕತ್ತತಿ
ಬಾಗಿನ ನೀಡಸ್ಕೊಳ್ಳಾಕ ಸೆರಗು
ಮುಂದ ಚಾಚೇತಿ

ಅಣ್ಣನ ಪ್ರೀತಿ ಜಾಸ್ತಿ ಆಗೆತಿ
ಅಪ್ಪನ ಪ್ರೀತಿ ಕಣ್ಣ ತುಂಬಕೊಂಡತಿ
ಅವ್ವನ ಪ್ರೀತಿ ಎದ್ಯಾಗ
ಹಾಸಿ ಹೊಕ್ಕೆತಿ

ಹೀಗೆ ಇರಲಿ ನನ್ನ ತವರ
ಖುಷಿಯಿಂದ, ಸಂತೋಷದಿಂದ
ಎಂದು ಉಡಿಲು ತುಂಬಕೊಂಡು
ಪ್ರೀತಿಯಿಂದ ಹರಸ್ತೇನಿ

ರಾಜೇಶ್ವರಿ ಲಕ್ಕಣ್ಣವರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ