ಇನ್ಯಾವತ್ತು ಮತ್ತೆ ನಾನು ಕತ್ತಲಲ್ಲಿ ಹೊರಗಡೆ ಕಾಲಿಡಲಿಲ್ಲ

“ಇನ್ನೂ ಸ್ವಲ್ಪ ಮಳ್ಯಾಗ ನೆನಿ ನೆಗಡಿ ಬರದ ಇರ್ತತತೀನ”

“ಏನಾತೀಗ ಅವ್ವ, ನೆಗಡಿ ಬಂದ್ರೆ”

ಏನಾತ ಅಂದ್ರೆ ಅದ್ರಾಗ ನಿನಗ ನೆಗಡಿ ಬಂದ್ರ ಲಗೂನ ಹೋಗುದಿಲ್ಲ ಅದು, ನಿನಗ ಬರುದಿರಲಿ ಮನೀ ಮಂದಿನ ಎಲ್ಲಾ ಅಡ್ಡಾಡಿಸ್ತಿನೀ ನೀ” ಎಂದು ನನ್ನವ್ವ ಮಳೆಯಲ್ಲಿ ನೆನೆದು ನೆಗಡಿ ಬರಿಸಿಕೊಂಡಿದ್ದ ನನಗೆ ಒಂದೇ ಸಮನೆ ಹೊರಗೆ ಸುರಿಯುವ ಮಳೆಯಂತೆ ಮನೆಯಲ್ಲಿ ಬೈಗುಳದ ಧಾರೆಯನ್ನೇ ಸುರಿಸುತ್ತಿದ್ದಳು.

ಅಬ್ಬಾ...! ನನ್ನ ಕರ್ಣ ಕಠೋರಗಳು ಅದನ್ನು ಕೇಳಿ-ಕೇಳಿ ಸುಸ್ತಾದವು. ಹೇಗಾದರೂ ಮಾಡಿ ಈ ಬೈಗುಳವನ್ನು ತಡೀಬೇಕೆಂದು “ಅಂಗಡಿಗೆ ಹೋಗಿ ಗುಳಿಗೆ ತಂದ ತಗೊಂತೆನಂತ” ನೀ ಸುಮ್ಮನಾಗು ಎಂದು ಹೇಳಿ ಸುಮ್ಮನ ಕೊರಿಸಿದೆ. ರಾತ್ರಿ ಸುಮಾರು 9.30 ಹೊರಗಡೆ ಇಂಥ ಬೇಶಿಗೆಯಲ್ಲೂ ಧಾರಾಕಾರವಾಗಿ ಸುರಿದು ತನ್ನ ಇರುವಿಕೆಯನ್ನು ತೋರಿಸುತ್ತೀರುವ ಮಳೆ ಅಮವಾಸ್ಯೆ ಹತ್ತಿರ ಬಂದಿದೆ ಎಂದು ಮೋಡದಲ್ಲಿ ಮರೆಯಾಗಿರುವ ಚಂದಿರ ಕರೆಂಟ್ ಬೇರೆ ಇಲ್ಲ. ಹೇಗೆ ಗುಳಿಗೆ ತರಲಿ? ಎಂದು ಚಿಂತಿಸತೊಡಗಿದೆ.

ಸಂಜೆ ಆಯ್ತಂದರೆ ಸಾಕು ಮನೆಯಿಂದ ಹೊರಗೆ ಕಾಲಿಡದ ಧೈರ್ಯವಂತೆ ನಾನು ಏನಾದರೂ ಆಗಲಿ ಅವ್ವನ ಬೈಗುಳದಿಂದ ಮುಕ್ತಿ ಪಡೆಯುವುದಕ್ಕೊಸ್ಕರನಾದರೂ ಅಂಗಡಿಗೆ ಹೋಗಲೆಬೇಕೆಂದು ತೀರ್ಮಾನಿಸಿದೆ. ಅಪ್ಪಾಜಿ “ನಾನು ತರ್ತೀನಿ ಅಂದ್ರು ಬೇಡ ನೀವು ಈಗ ತಾನೇ ಊರಿಂದ ಬಂದಿದೀರಿ. ನಾನೇ ಹೋಗ್ತಿನಿ ಅಂತ ಹೊರಟೆ, ಇದ್ದಬಿದ್ದ ಅಲ್ಪ ಧೈರ್ಯವನ್ನೆಲ್ಲಾ ಒಟ್ಟೂಗೂಡಿಸಿಕೊಂಡು ಮನೆಯಿಂದ ಹೆಜ್ಜೆ ಇಟ್ಟೆ ಜೋರಾಗಿ ಘಳನೆ ಮಿಂಚೊಂದು ಮಿಂಚಿತು ಮನದಲ್ಲಿಯೇ ಮುಕ್ಕೋಟಿ ದೇವರುಗಳನ್ನು ನೆನೆಯುತ್ತಾ ಕೈಯಲ್ಲಿ ಬ್ಯಾಟರಿ ಬೀಡುತ್ತಾ, ನೀರಿನಲ್ಲಯೆ ದಾರಿ ಮಾಡಿಕೊಳ್ಳುತ್ತಾ ನಡೆಯತೊಡಗಿದೆ.

ಎಲ್ಲೆಲ್ಲಿಯೂ ನೀರವ ಮೌನ, ಎಲ್ಲಾ ಮನೆಗಳ ಬಾಗಿಲು ಭದ್ರ ಪಡಿಸಿಕೊಂಡಿವೆ, ನಮ್ಮನೆಯಿಂದ ಸ್ವಲ್ಪ ದೂರದಲ್ಲಿ ಒಂದು ಹಳೆಯ ಮಣ್ಣಿನ ಮನೆ ಇದೆ ಅದೀಗ ಪಾಳು ಬಿದ್ದಿರುವದರಿಂದ ವಿಕಾರಗೊಂಡು ದೇವ್ವದ ಮನೆ ಥರ ಕಾಣುತ್ತಿತ್ತು. ನನಗೆ ಮೊದಲಿನಿಂದ ಆ ಮನೆ ಕಂಡರೆ ಭಯ, ಈಗ ಅದೇ ಮನೆ ಮುಂದೆನೆ ಹಾದು ಹೋಗಬೇಕು, ಕತ್ತಲೂ ಬೇರೆ ಎದೆಯಲ್ಲೇನೋ ನಡುಕು, ಆಗಾಗ ಗುಡುಗು-ಮಿಂಚು ಮಿಂಚಿ ಮರೆಯಾಗುತ್ತಿದ್ದವು.

ಹೀಗೆ ಭಯದಿಂದ ನಡುಗಿಕೊಂಡು ಅಂಗಡಿಗೆ ಹೋದೆ, ನನ್ನ ಪುಣ್ಯ ಅಂಗಡಿ ಇನ್ನೂ ತೆರೆದಿತ್ತು. ಅಂಗಡಿಯವರು “ಏನು ಇಷ್ಟೋತ್ತಲ್ಲಿ ಒಬ್ಳೆ ಬಂದಿದಿಯಲ್ಲ ಮಳೇಲಿ” ಅಂತಾ ಭೈದರು ಸುಮ್ನೆ ಅದನ್ನು ಕೇಳಿ ಮಾತ್ರೇ ತೆಗೆದುಕೊಂಡು ಬಂದೆ, ಮತ್ತೇ ಅದೇ ಮನೆ ಮುಂದೆನೆ ಹಾದು ಹೋಗಬೇಕು ಬೇರೆ ದಾರಿಯಲ್ಲಿ ಹಾಗೇ ಸಾಗುತ್ತೀರುವಾಗ ಹಿಂದೆಯಿಂದ ಯಾವುದೋ ಹೆಜ್ಜೆ ಸಪ್ಪಳ ಅಂತಹ ಜೋರು ಧಾರೆಯಲ್ಲೂ ನಡೆದುಕೊಂಡು ಬರುತ್ತೀರುವುದು ಸ್ಪಷ್ಟವಾಗಿ ಕೇಳುತ್ತಿದೆ ಎದೆಬಡಿತ ಮತ್ತಷ್ಟು ಜೋರಾಯಿತು ಭಯದಿಂದ ಜೋರು ಜೋರಾಗಿ ಉಸಿರಾಡತೊಡಗಿದ.

ಹಿಂದೆ ತಿರುಗಿ ನೋಡಲು ಧೈರ್ಯವಿಲ್ಲ ಅದು ಮತ್ತಷ್ಟು ನನ್ನನ್ನೆ ಸಮೀಪಿಸುತ್ತಿದೆ. ನನ್ನಲಿದ್ದ ಎಲ್ಲಾ ಧೈರ್ಯವನ್ನೆಲ್ಲಾ ಒಟ್ಟೂಗೂಡಿಸಿಕೊಂಡು ಹಿಂದೆ ತಿರುಗಿದೆ. ಘಳ್ಳನೆ ಮಿಂಚೊಂದು ಮಿಂಚಿತು. ಆ ಬೆಳಗಿನಲ್ಲಿ ಮತ್ತೇ ಆ ಆಕೃತಿಯನ್ನು ನೋಡಿದರೆ ಅದು.... ಅದು ... ಒಂದು ನಾಯಿ ಅದು ಅದು ಆ ಕತ್ತೆಲ ರಾತ್ರಿಯಲ್ಲಿ ಮತ್ತೇಷ್ಟು ವಿಕಾರವಾಗಿ ಕಂಡಿತು. ಅದನ್ನು ನೋಡಿ ಒಂದೇ ಉಸಿರಲ್ಲಿ ಓಡಿ ಮನೆ ಸೇರಿಕೊಂಡೆ.

ಮನೆ ಮುಟ್ಟಿದರೂ ಅದೇ ದೃಶ್ಯ ಕಣ್ಣ ಮುಂದೆ ಬರುತ್ತಿತ್ತು. ಆ ನಾಯಿ ಆ ರಾತ್ರಿಯಲ್ಲಿ ನನಗೆ ನಿದಿರೆ ಬರದಿರುವಂತೆ ಮಾಡಿತ್ತು. ಇನ್ಯಾವತ್ತು ನಾನು ಮತ್ತೇ ಕತ್ತಲಲ್ಲಿ ಹೊರಗಡೆ ಕಾಲಿಡಲಿಲ್ಲ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ