ಸಂಬಂಧಗಳು ಸವೆಯುತ್ತಿವೆ

ಸಂಬಂಧಗಳು ಸವಕಲಾಗುತ್ತಿವೆ,
ಹೌದು
ನೀವು ನಂಬಲೇಬೇಕು
ನಾಲ್ಕು ಮೂಲೆಯ
ಕಂಪ್ಯೂಟರಿನ ಮಧ್ಯೆದಲಿ
ಕಳೆದು ಹೋಗುತ್ತಿದ್ದೇವೆ ನಾವು

ಇಲ್ಲಿ ಯಾವುದಕ್ಕೂ ಸಮಯವಿಲ್ಲ
ನೆಮ್ಮದಿಯಾಗಿ ಕೂತು
ಮಾತನಾಡಲು ಸಹ
ನಂಬಲೇಬೇಕು ಸಂಬಂಧ
ಹಳಸಿ ಹೋಗುತ್ತಿದೆ ಎಂದರೆ

ಐದಾರು ಇಂಚಿನ
ಸ್ಮಾರ್ಟ್ ಫೋನಿನ
ಪರದೆಯಲ್ಲಿ ಬಾಂಧವ್ಯದ
ಬೆಸುಗೆ ಕಡಿತವಾಗುತ್ತಿದೆ
ವಾಟ್ಸಾಪು ಚಾಟಿನಲ್ಲಿ
ಗಂಟೆಗಟ್ಟಲೆ ಹರಟುವ,
ಎದುರಾದಾಗ ಮಾತು ಗಂಟಲಲ್ಲೆ
ಉಳಿದು, ಮಾತನಾಡಲಾಗದೆ
ಮುಖ ತಿರುವುತ್ತಿದ್ದೇವೆ.

ದೂರದಲ್ಲೆಲ್ಲೂ ಸ್ಕೈಪು,
ವಿಡಿಯೋ ಕಾಲಗಳಲ್ಲಿ
ಅಳಿದುಳಿದ
ಮಾತುಕತೆ

ನೀವು ನಂಬಲೇಬೇಕು
ಸಂಬಂಧಗಳು ಸವೆಯುತ್ತಿವೆ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ