ಬೀದಿ ದೀಪ

ನಿರ್ಜನ ಬೀದಿಯ ತಿರುವಿನಂಚಿನಲ್ಲಿ
ಮಾತೊಂದು ಮೂಕವಾಗಿದೆ
ಬೀದಿದೀಪಗಳು ಸುಮ್ಮನೆ ನಿಂತಿವೆ
ನಿತ್ಯವೂ ತನ್ನಡಿಯಲ್ಲಿ ನಡೆಯುತ್ತಿರುವ
ನೂರಾರು ಕಥೆ-ವ್ಯಥೆಗಳನ್ನು ಕಂಡು
ಕೆಂಪು ದೀಪದ ಸ್ಪುಟವಾದ ಬೆಳಕು
ಹದಿನೆಂಟರ ಹುಡುಗಿಯ ಮೇಲೆ
ಕಣ್ಣು ನೆಟ್ಟಿದೆ
ಹಲವಾರು ಕಣ್ಣುಗಳು ಅವಳತ್ತಲೆ
ಮುಖ ಮಾಡುತ್ತಿವೆ
'ನಾನು ವರ್ಜಿನ್' ಎಂಬ ಬೋರ್ಡ್ ಅನ್ನು
ಎದೆಗೆ ತಗಲಿಸಿಕೊಂಡಿದ್ದಾಳೆ
ತುಸು ಹೆಚ್ಚೇ ಎನ್ನುವಂತೆ
ವಾಲಾಡುತ್ತಿರುವನೊಬ್ಬ ಅವಳತ್ತಲೇ
ಹೆಜ್ಜೆ ಹಾಕುತ್ತಿದ್ದಾನೆ..
ಕೈಗಳು ವ್ಯವಹಾರವನ್ನು
ಅರಿತುಕೊಂಡಿವೆ
ಅಣತಿಯಾದಂತೆ ಅವಳು ಅವನ
ಹಿಂದೆಯೇ ನಡೆಯುತ್ತಿದ್ದಾಳೆ
ಬೀದಿ ದೀಪ ಸುಮ್ಮನೆ ನಗುತ್ತದೆ..

ರಾಜೇಶ್ವರಿ ಲಕ್ಕಣ್ಣವರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ