ಡಿಗ್ರಿ ಮುಗಿತು ಮುಂದೇನು?

ಡಿಗ್ರಿ ಮುಗಿತು ಮುಂದೇನು?

ಆಗ್ಲೆ ಇಪ್ಪತ್ತೊಂದು ವರ್ಷಗಳಾದವಾ ನನಗೆ, ದಿನಗಳು ಹೇಗೆ ಉರುಳಿದವೊ ಅರಿವಿಗೆ ಬರಲೆ ಇಲ್ಲ. ಡಿಗ್ರಿ ಕೂಡ ಮುಗಿಯಿತು. ಸದ್ಯ ಜೀವನದ ಒಂದು ತಿರುವಿಗೆ ಸಾಕ್ಷಿಯಾಗಿ ಕನ್‍ಪ್ಯೂಜನ್‍ಗಳಲ್ಲಿ ಕಳೆದು ಹೋಗುತ್ತಿರುವೆ, ಭವಿಷ್ಯತ್ತಿನ ಚಿಂತೆ, ಏನೂ ಮಾಡಲಿ ಎನ್ನುವ ಗೊಂದಲ, ನನ್ನಿಷ್ಟದಂತೆ ಪತ್ರಿಕೋದ್ಯಮ ಕ್ಷೇತ್ರಕ್ಕೆ ಹೆಜ್ಜೆ ಇಡಲೆ ಅಥವಾ ಬೇರೆ ವಿಷಯ ತೆಗೆದುಕೊಳ್ಳಲೆ ಇವೆಲ್ಲವನ್ನೊ ನೋಡುತ್ತಿದ್ದರೆ ಯಾಕಾದರೂ  ಡಿಗ್ರಿ ಮುಗಿಯಿತೊ ಇನ್ನೊಂದು ವರ್ಷ ಡಿಗ್ರಿ ಕಲಿಯುವುದಕ್ಕೆ ಇರಬಾರದಾ ಎಂದನಿಸುತ್ತಿದೆ.

ಡಿಗ್ರಿಯ ಸ್ನೇಹಿತರು ಇನ್ನೂ ಮುಂಚಿನಂತೆ ದಿನವೂ ಸಿಗುವುದಿಲ್ಲ. ಎಲ್ಲರಿಗೂ ಮುಂದೇನು ಎನ್ನುವ ಚಿಂತೆ. ಏನೇನೊ ಓದಬೇಕು ಕಲಿಯಬೇಕು ಎಂದುಕೊಂಡಿದ್ದ ಎಲ್ಲವೂ ನೆರವೆರುತ್ತಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

ಇಪ್ಪತ್ತೊಂದು ಯಾಕಾದರೂ ಆಗುತ್ತೋ, ಯಾಕಾದರೂ ಡಿಗ್ರಿ ಮುಗಿಯುತ್ತೊ? ಡಿಗ್ರಿ ಮುಗಿತು ಅಂದ್ರೆ ಸಾಕು ಹೆಣ್ಮಕ್ಕಳಿಗೆ ಮನೇಲಿ ವರಾನ್ವೇಷಣೆ ಕೆಲಸ ಪ್ರಾರಂಭವಾಗುತ್ತದೆ, ಹೆಣ್ಮಕ್ಕಳನ್ನು ಬಹು ಬೇಗ ಮನೆಯಿಂದ ದಾಟಿಸಿದರೆ ಸಾಕು ಜವಾಬ್ದಾರಿ ಮುಗಿಯುತ್ತದೆ ಎಂದು ಯಾಕೆ ಭಾವಿಸುತ್ತಾರೆ, ಅದೇ ಅರ್ಥವಾಗುವುದಿಲ್ಲ, ಜೀವನದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ನಿಜವಾದ ಧೈರ್ಯ, ಸಾಮಥ್ರ್ಯ ಈಗ ತಾನೇ ಮೂಡುವುದೊರಳೊಳಗಾಗಿ ಅವರನ್ನು ಬೇಗ ಗಂಡನ ಮನೆಗೆ ಕಳಿಸಿ ಬಿಡಬೇಕು ಎಂಬ ಚಿಂತನೆಯಲ್ಲಿ ಹೆತ್ತವರು.

ಏನ ಮಾಡಬೇಕು ಗೊತ್ತಾಗುತಿಲ್ಲ? ಎಲ್ಲಾ ಗೊಂದಲದಲ್ಲಿ...

ಕಾಮೆಂಟ್‌ಗಳು

  1. ಪತ್ರಿಕೋದ್ಯಮದಲ್ಲಿ ಎಂ.ಎ. ಮಾಡಬೇಡಿ. ಅದರ ಬದಲಿಗೆ ಕನ್ನಡ ಅಥವಾ ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮಾಡಿ. ಅಥವಾ ಬೇರಾವುದೇ ಸಬ್ಜೆಕ್ಟ್‌ನಲ್ಲಿ ಎಂ.ಎ.ಮಾಡಿ. ಪತ್ರಿಕೋದ್ಯಮವನ್ನು ಹೊರತುಪಡಿಸಿ ಬೇರಾವುದೇ ಪಿಜಿ ಮಾಡಿದಲ್ಲಿ ನಿಮಗೆ ಆಯ್ಕೆಗಳು ಸಾಕಷ್ಟು ಇರುತ್ತವೆ. ಬೇರೆ ವಿಷಯದಲ್ಲಿ ಎಂ.ಎ.ಮಾಡಿದವರೂ ಈಗ ಪತ್ರಕರ್ತರಾಗಬಹುದು. ಯೋಚಿಸಿ ನೋಡಿ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!