ಹಿತ್ತಲು ಎಂಬ ಕಾಡುವ ರೂಪಕ..!!
ಪ್ರತಿಯೊಂದು ಮನೆಗೂ ಒಂದೊಂದು ಹಿತ್ತಲು ಹಾಗೂ ಹಿಂಬಾಗಿಲು ಎಂಬುದೊಂದು ಇರಲೇಬೇಕು. ಪ್ರತಿಯೊಂದು ಮನೆಗೂ ಆ ಮನೆಯ ಹಿತ್ತಲೇ ಭೂಷಣ. ಈಗಿನ ಸಿಟಿ ಮನೆಗಳಲ್ಲಿ ಹಿತ್ತಲು ಎನ್ನುವುದು ಗೊತ್ತಿರುವುದಾಗಿರಲಿ ಮನೆ ಸಿಕ್ಕರೆ ಸಾಕು ಎನ್ನುವ ಹಾಗಿರುತ್ತದೆ. ಆದರೆ ಹಳ್ಳಿಯ ಕಡೆ ಹಾಗಲ್ಲ. ಅಲ್ಲಿ ಮನೆ ಜೊತೆಗೆ ಎಲ್ಲರೂ ನೋಡುವುದು ಹಿತ್ತಲು ಇದೆಯೊ ಇಲ್ಲವೊ ಎನ್ನುವುದನ್ನು. ಮುಂಬಾಗಿಲಂತೆ ಹಿಂಬಾಗಿಲು ಎನ್ನುವುದು ಆ ಮನೆಯ ರೂಪಕವಿದ್ದಂತೆ. ಹಿತ್ತಲು ಎನ್ನುವುದು ಕೇವಲ ಖಾಲಿ ಜಾಗವಲ್ಲ. ಅದೊಂದು ವಿನೂತನ ಪ್ರಪಂಚ. ಹೆಚ್ಚಿನ ಹೆಂಗಳೆಯರ ಮಾತಿನ ಹರಟೆಯ ಜಾಗವದು. ಹಿತ್ತಲಿನಲ್ಲಿ ಸದ್ದಾಗದೆ ಮಾತಾಡಲೂ ಬಂದು ಕೂತರೆ ಅಷ್ಟೊತ್ತಿನವರೆಗೆ ಅಲ್ಲಿ ಮೌನ ತಾಂಡವಾಡುತ್ತಿದ್ದು ಒಮ್ಮೆಲೆ ಅದು ಕೂಡ ಇವರ ಮಾತಿನ ಗಲಿಬಿಲಿಯನ್ನು ತಾಳಲಾರದೆ ಕಿವಿ ಮುಚ್ಚಿಕೊಳ್ಳುತ್ತದೆ. ಹಿತ್ತಲಿನ ತುಂಬೆಲ್ಲ ಹಾರಾಡುತ್ತಿರುವ ಅಮ್ಮನ, ಅಕ್ಕನ ತಲೆಗೂದಲು, ಮೂಲೆಯಲ್ಲಿ ಸಣ್ಣ ಗುಡ್ಡದ ಹಾಗೇ ಒತ್ತೊತ್ತಾಗಿಟ್ಟಿರುವ ಕಟ್ಟಿಗೆ ತುಂಡು, ಹಿತ್ತಲ ಗಿಡವು ಮದ್ದಲ್ಲ ಎಂಬ ಗಾದೆಯೊಂದು ಅಸ್ತಿತ್ವದಲ್ಲಿದ್ದರೂ, ಈ ಪಕ್ಕದ ಮೂಲೆಯಲ್ಲಿ ಬೆಳೆದಿರುವ ಸೊಪ್ಪು, ಹೂವು, ತರಕಾರಿ ಗಿಡಗಳು. ಅಣ್ಣನ ಸಿಗರೇಟು ಸೇದುವ ತಂಗುದಾಣವಿದು. ತಮ್ಮ ಮನೆಗೆ ಲೇಟಾಗಿ ಬಂದರೆ ಮನೆ ಒಳಗೆ ಸೇರುವಂತಹ ಕಳ್ಳದಾರಿ. ಹೀಗೆ ಹಿತ್ತಲು ಎಂಬುದು ಕೇವಲ ಖಾಲಿ ಜಾಗವಲ್ಲ. ಅಲ್ಲಿ ಹಲವಾರು ಭಾವಗಳಿವೆ. ಅಕ್ಕ ಕದ್ದು ಮುಚ್ಚಿ ತನ್ನ ಪ