ಪೋಸ್ಟ್‌ಗಳು

ಆಗಸ್ಟ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಸ್‍ಸ್ಟ್ಯಾಂಡ್‍ನ ಬಿಡಿ-ಬಿಡಿ ಭಾವಗಳು...

ಅದು ನಗರದ ಪ್ರಮುಖ ಸ್ಥಳ. ನೂರಾರು ಜನರು ಅಪರಿಚಿತರು ಅಲ್ಲಿ ಸೇರುತ್ತಾರೆ. ಅಲ್ಲಿ ಎಷ್ಟೋ ಜನ ಉದ್ಯೋಗ ಕಂಡುಕೊಂಡಿದ್ದಾರೆ. ಹಲವಾರು ಭಾವಗಳಿಗೆ ಆ ಸ್ಥಳ ಸಾಕ್ಷಿಯಾಗಿದೆ. ಅದು ಯಾವದು ಎಂದು ಯೋಚನೆ ಮಾಡುತ್ತಿರುವೀರಾ ಅದು ನಗರದ ಪ್ರಮುಖ ಬಸ್‍ಸ್ಟ್ಯಾಂಡ್. ಎಲ್ಲೆಲ್ಲಿಂದಲೋ ಬರುವ ಜನರಿಗೆ ನೆಲೆಯಾಗಿದೆ. ಹಲವಾರು ಜನರಿಗೆ ಆಸರೆ ನೀಡಿದೆ. ಕಂಡು ಕಾಣದಂತೆ ಕೆಲವೊಂದನ್ನು ತನ್ನ ಮಡಿಲಲ್ಲಿಯೆ ಅವಿತಿಸಿಕೊಂಡಿದೆ. ಹುಡುಕಲು ಹೊರಟರೆ ನೂರಾರು ಭಾವಗಳು ಕಣ್ಮುಂದೆ ಪೊರೆಯುತ್ತವೆ. ಸೂರ್ಯ ಇನ್ನೂ ತನ್ನ ನಿದ್ದೆಯಿಂದ ಎಚ್ಚೆತ್ತುಕೊಳ್ಳುವ ಮುಂಚೆಯೇ ಬಸ್‍ಸ್ಟ್ಯಾಂಡ್‍ನಲ್ಲಿ ಆಗಲೇ ಕೆಲಸದ ತಯಾರಿಯು ಪ್ರಾರಂಭವಾಗಿರುತ್ತದೆ. ನಸುಕಿನಲ್ಲಿಯೆ ಸವಿನಿದ್ದೆಯಲ್ಲಿಯೇ ಊರಿಗೆ ಕಾಲಿಡುವ ಪ್ರಯಾಣಿಕರಿಗಾಗಿ, ಥಂಡಿಯನ್ನು ಹೋಗಲಾಡಿಸಲು, ಕಂಡಕ್ಟರ್, ಡ್ರೈವರ್‍ಗಳನ್ನು ವಿಚಾರಿಸುತ್ತ ಚಾಯ್ ಚಾಯ್ ಎಂದು ಕೂಗುತ್ತ ಚಾಯ್‍ವಾಲ ಒಬ್ಬ ಬಹುಬೇಗ ಪರಿಚಿತನಾಗುತ್ತಾನೆ. ಗಾಳಿಯಲ್ಲಿ, ಬಸ್ಸಿನಲ್ಲಿ ಬಂದಿರುವ ಕಾರಣಕ್ಕೆ ಮರುಟಿರುವ ಕೈಗಳನ್ನು ಬೆಚ್ಚಗೆ ಮಾಡಿಕೊಳ್ಳಲು, ಚಾಯ್‍ವಾಲಾನ ಪೂರ್ವಾಗ್ರಹವನ್ನು ವಿಚಾರಿಸುತ್ತಾ ಇನ್ನೊಂದು ಟೀ ಕುಡಿದಾಗಲೇ ಸಮಾಧಾನ. ಹೊತ್ತು ಸರಿಯುತ್ತಾ ಹೋದಂತೆ ಬಸ್‍ಸ್ಟ್ಯಾಂಡ್ ಮತ್ತಷ್ಟು ಕಳೆಗಟ್ಟುತ್ತಾ ಹೋಗುತ್ತದೆ. ಬಸ್ಸಿನಲ್ಲಿ ಬರುವ ಪೇಪರ್ ಬಂಡಲ್‍ಗಳನ್ನು ಇಳಿಸಿಕೊಳ್ಳುತ್ತಾ, ಅವುಗಳನ್ನು ಹೊಂದಿಸಿಕೊಳ್ಳುತ್ತಾ, ಎಲ್ಲೆಲ್ಲಿಗೆ ಎಷ್ಟೆಷ್ಟು ...

ಹಂಪಿ

ಒಂದಾನೊಂದು ಕಾಲದಲ್ಲಿ ಸೇರಲ್ಲಿ ಮುತ್ತು-ರತ್ನಗಳನ್ನು ಮಾರುತ್ತಿದ್ದರಂತೆ, ಇತಿಹಾಸವನ್ನು ಕಂಡವರಾರು ನಾವು ನೋಡಿದ್ದೆವೆ ಇತಿಹಾಸವನ್ನು ತಲೆ ತಲೆಗಳಿಂದ ಹರಿದು ಬಂದ ಮಾತಿನಲ್ಲಿ.. ಅವರಿವರು ಬರೆದ ...

ಬಸ್ಸಿನಲ್ಲೊಂದು ಕಥನ

ಕಿಟಕಿಯ ಬದಿಯಲ್ಲಿ ಕೂತ ಕನಸು ಕಂಗಳ ಪೋರನೊಬ್ಬ ಹೊಸದೆನನ್ನೊ ನೋಡುವಂತೆ ಆಚೆ ಬಯಲನ್ನು ಎವೆಯಿಕ್ಕದೆ ನೋಡುತ್ತಿದ್ದಾನೆ.. ಬೊಕ್ಕ ತಲೆಯ, ಬೊಚ್ಚು ಬಾಯಿಯ ಹಿರಿದೆಲೆಯ ಅಜ್ಜನೊಬ್ಬ ಚಿಗುರಲೆಯ ತನ್ನ ಮೊಮ...

ಗೌರಿ ಹಬ್ಬ

ಕಾಯುತಿಹಳು ತಂಗಿ ಹೊಸ್ತಿಲ ತುದಿಯಲ್ಲಿ ನಿಂತು ಹಬ್ಬ ಬಂತು ಅಣ್ಣ ಯಾಕ ಕರೆಯಾಕ ಬಂದಿಲ್ಲ ಎಂದು ಹಬ್ಬ ಬಂದೈತಿ ಬಾಗಿನ ಉಡಿ ತುಂಬಕೊಂಡು ನನ್ನನ್ನು ಬೆಳೆಸಿದ ತವರಿಗೆ ಹರಸುವುದು ಐತಿ ಉಡೂಗೊರೆ ತೆಗೆದು...

ಪ್ರಕೃತಿಯ ಅಳಲು

ನಾನು ಮಾರ್ಕೆಟ್‍ನಿಂದ ಮನೆಗೆ ಬರುತ್ತಿದ್ದೆ ಅದೊಂದು ನಿರ್ಜನ ಪ್ರದೇಶ. ಒಬ್ಬ ಹೆಂಗಸು ನನ್ನನ್ನು ಹಿಂಬಾಲಿಸುತ್ತಿದ್ದಳು ಅವಳು ನೋಡಲು ಒಂದು ಥರ ಹುಚ್ಚಿಯಂತೆ ಇದಳು, ಮೈಮೇಲೆ ಕೂದಲು ಹರಡಿಕೊಂಡಿತ್ತ...

ಸ್ವಾದ-ರುಚಿಯ ಸಮ್ಮಿಲನದ ಧಾರವಾಡ ಪೇಡಾ

ಒಂದೊಂದು ಊರು ಒಂದೊಂದು ವಸ್ತುವಿನಿಂದ, ಸ್ಥಳದಿಂದ ಪ್ರಸಿದ್ದತೆಯನ್ನು ಹೊಂದಿರುತ್ತದೆ. ಚನ್ನಪಟ್ಟಣದ ಗೊಂಬೆಗಳು, ಗೋಕಾಕ್ ಕರದಂಟು, ಬೆಳಗಾವಿಯ ಕುಂದಾ, ಹುಬ್ಬಳ್ಳಿಯ ಮಿರ್ಚಿ-ಮಂಡಕ್ಕಿ, ಕೊಣ್ಣುರಿನ ಪ...

ರೈಲಿನಲ್ಲಿ...

ಮೂಲೆಯಲ್ಲಿ ಮಲಗಿದವನೊಬ್ಬನ ಪಾದಗಳು ಹೊದ್ದುಕೊಂಡಿದ್ದ ಚಾದರದಾಚೆಗೂ ಹೊರಗೆ ಇಣುಕಿ ಹಾಕುತ್ತಿವೆ.. ಚಾಯ್-ಕಾಫಿಯವನ ಕೂಗು ಮಲಗಿದವರನ್ನೆಲ್ಲ ಬಡಿ-ಬಡಿದು ಎಬ್ಬಿಸುತ್ತಿದೆ.. ರಾತ್ರಿಯೆಲ್ಲ ಸೀಟು ಸಿಗ...