ಸಂಗೀತಾಸಕ್ತರ ಮನಸೆಳೆದ “ಮುಂಜಾವು”

ಸಂಗೀತಾಸಕ್ತರ ಮನಸೆಳೆದ “ಮುಂಜಾವು” ಇಂದಿನ ದಿನಮಾನದಲ್ಲಿ ಯುವಜನತೆಯು ಕಿರುಚಿತ್ರಗಳನ್ನು ನಿರ್ಮಿಸುವತ್ತ, ಸಂಗೀತದ(ಮ್ಯೂಸಿಕಲ್) ಆಲ್ಬಂಗಳನ್ನು ಹೊರ ತರುವಂತಹ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಿರುಚಿತ್ರಗಳನ್ನು ಮ್ಯೂಸಿಕಲ್ ವಿಡಿಯೋಗಳನ್ನು ಕ್ಯಾಮರಾದಲ್ಲಿ ಅಥವಾ ಮೊಬೈಲ್ ಕ್ಯಾಮರದಲ್ಲಿಯೇ ಚಿತ್ರಿಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾ ತಮ್ಮ ಪ್ರತಿಭೆಯನ್ನು ತೋರುತ್ತಿದ್ದಾರೆ. ಇತ್ತೀಚಿಗೆ ಕನ್ನಡದಲ್ಲಿ ಸಂಗೀತದಲ್ಲಿ ಒಳ್ಳೆಯ ಬದಲಾವಣೆ ಕಾಣುತ್ತಿದ್ದರೂ ಅದಕ್ಕೆ ಪೂರಕವಾದ ವಾತಾವರಣ ದೊರೆಯುತ್ತಿಲ್ಲ. ಬೇರೆ ಭಾಷೆಗಳಲ್ಲಿ ಒಖಿಗಿ uಟಿಠಿಟuggeಜ, ಛಿoಞe sಣuಜio, ಏಚಿಠಿಠಿಚಿ ಖಿvಯ ಒusiಛಿ ಒoರಿo ನಂತಹ ಮುಂತಾದ ಆನ್‍ಲೈನ್ ವೇದಿಕೆಗಳು ಲಭ್ಯವಿವೆ. ಆದರೆ ಇಂತಹ ವೇದಿಕೆಗಳು ಕನ್ನಡದ ಮಟ್ಟಿಗೆ ಬಹಳ ಕಡಿಮೆ ಎಂದೇ ಹೇಳಬಹುದು. ಅಲ್ಲೊಂದು ಇಲ್ಲೊಂದು ಎನ್ನುವಂತೆ ಕೆಲವೊಂದಿಷ್ಟು ಯುಟ್ಯೂಬ್‍ನಂತಹ ಆನ್‍ಲೈನ್ ವೇದಿಕೆಗಳು ಬೆರಳೆಣಿಯೆಷ್ಟು ಮಾತ್ರ ಇವೆ. ಆದರೆ ಕೆಲವರು ಸ್ವಆಸಕ್ತಿಯಿಂದ, ಸಮಾಜಕ್ಕಾಗಿ ಹಾಗೂ ಮರೆತು ಹೋದಂತಹ ಹಳೆಯ ಹಾಡುಗಳನ್ನು ಮರುಸೃಷ್ಟಿಸುವುದಕ್ಕಾಗಿ ಜನರಲ್ಲಿ ಇನ್ನೂ ಹೆಚ...